ಜನವರಿ 8-9ರ ಮೊದಲೇ ಬ್ಯಾಂಕ್ ವ್ಯವಹಾರಗಳನ್ನು ಮುಗಿಸಿ !
ಹೊಸದಿಲ್ಲಿ, ಜ.5: ಸರಕಾರದ ಕಾರ್ಮಿಕ ವಿರೋಧಿ ನೀತಿಯನ್ನು ವಿರೋಧಿಸಿ ಹತ್ತು ಕೇಂದ್ರ ವ್ಯಾಪಾರ ಸಂಘಗಳು ಕರೆನೀಡಿರುವ ರಾಷ್ಟ್ರವ್ಯಾಪಿ ಬಂದ್ಗೆ ಬೆಂಬಲ ಸೂಚಿಸಿರುವ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ ಉದ್ಯೋಗಿಗಳ ಎರಡು ಸಂಘಗಳು ಜನವರಿ 8-9ಕ್ಕೆ ಬ್ಯಾಂಕ್ ಬಂದ್ಗೆ ಕರೆ ನೀಡಿದೆ.
ಜನವರಿ 8-9ರಂದು ರಾಷ್ಟ್ರವ್ಯಾಪಿ ಬಂದ್ ಆಚರಿಸುವುದಾಗಿ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ ಮತ್ತು ಭಾರತೀಯ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟ ಭಾರತೀಯ ಬ್ಯಾಂಕ್ಗಳ ಸಂಘಕ್ಕೆ ಮಾಹಿತಿ ನೀಡಿದೆ. ಇಂಟಕ್, ಎಐಟಿಯುಸಿ, ಎಚ್ಎಂಎಸ್, ಸಿಐಟಿಯು, ಎಐಯುಟಿಯುಸಿ, ಎಐಸಿಸಿಟಿಯು, ಯುಟಿಯುಸಿ, ಟಿಯುಸಿಸಿ,ಎಲ್ಪಿಎಫ್ ಮತ್ತು ಎಸ್ಇಡಬ್ಲೂಎ ಮುಂತಾದ ಹತ್ತು ಕೇಂದ್ರ ವ್ಯಾಪಾರ ಸಂಘಗಳು ಕೇಂದ್ರದ ಕಾರ್ಮಿಕ ವಿರೋಧಿ ನೀತಿಯನ್ನು ವಿರೋಧಿಸಿ ಜನವರಿ 8-9ರಂದು ರಾಷ್ಟ್ರವ್ಯಾಪಿ ಬಂದ್ಗೆ ಕರೆ ನೀಡಿವೆ. ಸರಕಾರದ ಮುಂದೆ ಈ ಸಂಘಗಳು ತಮ್ಮ ಹನ್ನೆರಡು ಬೇಡಿಕೆಯನ್ನಿಟ್ಟಿವೆ.
Next Story