ಮುಂಬೈಯ ಪಂಚತಾರಾ ಹೋಟೆಲ್ನಲ್ಲಿ ಕೆನಡಾ ಮಹಿಳೆಗೆ ಕಿರುಕುಳ : ಓರ್ವನ ಬಂಧನ
ಮುಂಬೈ, ಜ.17: ಮುಂಬೈಯ ಪಂಚತಾರಾ ಹೋಟೆಲ್ನಲ್ಲಿ ಉಳಿದುಕೊಂಡಿದ್ದ ಕೆನಡಾ ದೇಶದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಅದೇ ಹೋಟೆಲ್ನ ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಮಿತ್ ರಾವ್(32 ವರ್ಷ) ಬಂಧಿತ ವ್ಯಕ್ತಿ. ಜುಹುವಿನಲ್ಲಿರುವ ಹೋಟೆಲ್ನಲ್ಲಿ ಜನವರಿ 5ರಂದು ಘಟನೆ ನಡೆದಿದೆ. ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯ ಉದ್ಯೋಗಿಯಾಗಿರುವ 35 ವರ್ಷದ ಮಹಿಳೆ ಭಾರತಕ್ಕೆ ಆಗಿಂದಾಗ್ಗೆ ಭೇಟ ನೀಡುತ್ತಿದ್ದಾರೆ. ಜನವರಿ 5ರಂದು ಈ ಹೋಟೆಲ್ನಲ್ಲಿ ಉಳಿದುಕೊಂಡಿದ್ದಾಗ ರೂಮಿಗೆ ಬಂದಿದ್ದ ಸುಮಿತ್ ರಾವ್ ತನ್ನೊಂದಿಗೆ ಸೆಲ್ಫೀ ತೆಗೆದುಕೊಳ್ಳುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ತಿಳಿಸಿದ್ದಾರೆ. ಮೊದಲು ಹೋಟೆಲ್ನ ಆಡಳಿತ ವರ್ಗದ ಗಮನಕ್ಕೆ ತಂದ ಬಳಿಕ ಸೋಮವಾರ ಸಾಂತಾಕ್ರೂಝ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ಮರು ದಿನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story