ಪಿಯೂಷ್ ಗೋಯಲ್ ಗೆ ಹಣಕಾಸು ಸಚಿವಾಲಯದ ಹೆಚ್ಚುವರಿ ಜವಾಬ್ದಾರಿ
ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅರುಣ್ ಜೇಟ್ಲಿ
ಹೊಸದಿಲ್ಲಿ, ಜ.23: ಚಿಕಿತ್ಸೆಗಾಗಿ ಅರುಣ್ ಜೇಟ್ಲಿಯವರು ಅಮೆರಿಕಕ್ಕೆ ತೆರಳಿರುವ ಹಿನ್ನೆಲೆಯಲ್ಲಿ ರೈಲ್ವೆ ಸಚಿವ ಪಿಯೂಷ್ ಗೋಯಲ್ ರಿಗೆ ಹಣಕಾಸು ಸಚಿವಾಲಯದ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಲಾಗಿದೆ.
ಜೇಟ್ಲಿಯವರು ಇದೀಗ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಧ್ಯಂತರ ಬಜೆಟ್ ಗೆ ಇನ್ನು 10ಕ್ಕಿಂತಲೂ ಕಡಿಮೆ ದಿನಗಳಿವೆ. ಫೆಬ್ರವರಿ 1ರಂದು ಬಜೆಟ್ ಮಂಡನೆಯಾಗಲಿದೆ.
Next Story