ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ: ವೈದ್ಯಕೀಯ ವರದಿ
10 ದಿನ ಕಳೆದರೂ ಇಮಾಮ್ ಬಂಧನವಿಲ್ಲ
ಕೊಚ್ಚಿ, ಫೆ.14: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ ನಡೆದು 10 ದಿನಗಳು ಕಳೆದರೂ ಇದುವರೆಗೂ ಇಮಾಮ್ ನನ್ನು ಬಂಧಿಸದ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನುವುದು ವೈದ್ಯಕೀಯ ಪರೀಕ್ಷೆಗಳಿಂದ ತಿಳಿದು ಬಂದಿದೆ ಎಂದು ನೆಡುಮಂಗಾಡ್ ಡಿವೈಎಸ್ಪಿ ಡಿ.ಅಶೋಕನ್ ಸ್ಪಷ್ಟಪಡಿಸಿದ್ದಾರೆ.
ಕೇರಳ ಇಮಾಮ್ಸ್ ಕೌನ್ಸಿಲ್ ನ ಸದಸ್ಯನಾಗಿರುವ ಆರೋಪಿ ಶಫೀಕ್ ಅಲ್ ಖಾಸಿಮಿ ವಿರುದ್ಧ ಮಂಗಳವಾರ ಪ್ರಕರಣ ದಾಖಲಾಗಿದೆ. ತೋಲಿಕ್ಕೋಡ್ ಮಸೀದಿ ಅಧ್ಯಕ್ಷ ಪೊಲೀಸರಿಗೆ ದೂರು ನೀಡಿದ್ದರು.
Next Story