ಭಾರೀ ಹಿಮಪಾತ: ಓರ್ವ ಸೈನಿಕ ಮೃತ್ಯು
ಐವರು ಯೋಧರು ನಾಪತ್ತೆ
ಕಿನ್ನೌರ್, ಫೆ.20: ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ನಮ್ಗ್ಯಾ ಪ್ರದೇಶದಲ್ಲಿ ಭಾರೀ ಹಿಮಪಾತ ಸಂಭವಿಸಿದ್ದು, ಓರ್ವ ಸೈನಿಕ ಮೃತಪಟ್ಟಿದ್ದು, ಐವರು ಸೈನಿಕರು ಹಿಮದಡಿ ಸಿಲುಕಿಕೊಂಡಿದ್ದಾರೆ.
ಹಿಮದಡಿ ಸಿಲುಕಿಕೊಂಡಿದ್ದ ಒಬ್ಬ ಸೈನಿಕನನ್ನು ಗಂಭೀರ ಸ್ಥಿತಿಯಲ್ಲಿ ಹೊರತೆಗೆಯಲಾಗಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ. ಇನ್ನುಳಿದ ಸೈನಿಕರು ಬದುಕುಳಿಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
Next Story