ಮಂಗಳೂರು ಮೂಲದ ಫೇ ಡಿಸೋಝ ಅವರಿಗೆ ‘ವರ್ಷದ ಶ್ರೇಷ್ಠ ಸಂಪಾದಕಿ’ ಪ್ರಶಸ್ತಿ
ಮುಂಬೈ, ಫೆ. 21 : ಟೈಮ್ಸ್ ಗ್ರೂಪ್ ನ ‘ಮಿರರ್ ನೌ’ ಟಿವಿ ವಾಹಿನಿಯ ಪ್ರಧಾನ ಸಂಪಾದಕಿ, ಮಂಗಳೂರು ಮೂಲದ ಫೇ ಡಿಸೋಝ ಅವರಿಗೆ ಈ ಬಾರಿಯ ಇಎನ್ ಬಿಎ ಶ್ರೇಷ್ಠ ಸುದ್ದಿ ಟಿವಿ ವಾಹಿನಿಯ ಪ್ರಧಾನ ಸಂಪಾದಕಿ ಪ್ರಶಸ್ತಿ ಲಭಿಸಿದೆ.
ಇತ್ತೀಚಿಗೆ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಅವರ ನೇತೃತ್ವದ ‘ಮಿರರ್ ನೌ’ ತೀರ್ಪುಗಾರರ ಆಯ್ಕೆಯ ವರ್ಷದ ಶ್ರೇಷ್ಠ ಸುದ್ದಿ ವಾಹಿನಿ ಪ್ರಶಸ್ತಿಗೂ ಪಾತ್ರವಾಗಿದೆ.
ಅಷ್ಟೇ ಅಲ್ಲದೆ ‘ಮಿರರ್ ನೌ’ಗೆ ಅತ್ಯುತ್ತಮ ಟಾಕ್ ಷೋ ಹಾಗು ಅತ್ಯುತ್ತಮ ಸುದ್ದಿ ಕವರೇಜ್ ಪ್ರಶಸ್ತಿಗಳೂ ಬಂದಿವೆ. ಫೇ ಡಿಸೋಝ ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯ ನಿರೂಪಕಿ ಹಾಗು ಪತ್ರಕರ್ತೆಯಾಗಿ ಮೂಡಿ ಬಂದಿದ್ದಾರೆ. ಅವರು ನಡೆಸಿಕೊಡುವ ಅರ್ಬನ್ ಡಿಬೇಟ್ ಅತ್ಯಂತ ಪ್ರಸಿದ್ಧಿ ಪಡೆದಿರುವ ಚರ್ಚಾ ಕಾರ್ಯಕ್ರಮವಾಗಿದೆ. ಆಳುವವರಿಗೆ ಮುಲಾಜಿಲ್ಲದೆ ಪ್ರಶ್ನೆ ಕೇಳುವ ಹಾಗು ಸತ್ಯಕ್ಕೆ ಕನ್ನಡಿ ಹಿಡಿಯುವ ಪತ್ರಕರ್ತೆ ಎಂಬ ಖ್ಯಾತಿ ಅವರಿಗಿದೆ.
Next Story