ಸಬ್ಸಿಡಿ ಸಹಿತ ಎಲ್ಪಿಜಿ ದರ 2.08ರೂ. ಹೆಚ್ಚಳ
ಹೊಸದಿಲ್ಲಿ,ಫೆ.28: ಸಬ್ಸಿಡಿ ಹೊಂದಿರುವ ಗೃಹಬಳಕೆಯ ಅಡುಗೆ ಅನಿಲ ದರದಲ್ಲಿ 2.08ರೂ. ಮತ್ತು ಸಬ್ಸಿಡಿ ರಹಿತ ಎಲ್ಪಿಜಿ ದರದಲ್ಲಿ 42.50ರೂ. ಏರಿಕೆ ಮಾಡಿರುವುದಾಗಿ ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಐಒಸಿ) ಗುರುವಾರ ತಿಳಿಸಿದೆ. ಮೂರು ತಿಂಗಳ ಕಾಲ ಸತತ ಇಳಿಕೆಯ ನಂತರ ಇದೀಗ ಎಲ್ಪಿಜಿ ದರದಲ್ಲಿ ಏರಿಕೆಯಾಗಿದೆ.
ಈ ಏರಿಕೆಯಿಂದ 14.2 ಕೆ.ಜಿ ಸಬ್ಸಿಡಿ ಹೊಂದಿರುವ ಎಲ್ಪಿಜಿ ಸಿಲಿಂಡರ್ ಬೆಲೆ 495.61 ರೂ. ತಲುಪಿದ್ದರೆ ಸಬ್ಸಿಡಿರಹಿತ ಎಲ್ಪಿಜಿ ಸಿಲಿಂಡರ್ ಬೆಲೆ 701.50ರೂ.ಗೆ ಏರಿಕೆಯಾಗಿದೆ.
Next Story