ಕುಪ್ವಾರಾದಲ್ಲಿ ಉಗ್ರರ ಜತೆ ಗುಂಡಿನ ಚಕಮಕಿ
ಜಮ್ಮು, ಮಾ. 1: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರಗಾಮಿಗಳ ನಡುವೆ ಭೀಕರ ಗುಂಡಿನ ಚಕಮಕಿ ಶುಕ್ರವಾರ ನಸುಕಿನಲ್ಲಿ ಆರಂಭವಾಗಿದೆ.
ಕುಪ್ವಾರಾ ಜಿಲ್ಲೆಯ ಬಾಬಾಗುಂಡ್ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಆಧರಿಸಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿದ ಹಿನ್ನೆಲೆಯಲ್ಲಿ ಗುಂಡಿನ ಚಕಮಕಿ ನಡೆದಿದೆ.
ಶೋಧ ಕಾರ್ಯಾಚರಣೆ ವೇಳೆ ಉಗ್ರರು ಭದ್ರತಾ ಪಡೆಯತ್ತ ಗುಂಡು ಹಾರಿಸಿದ್ದರಿಂದ ಶೋಧ ಕಾರ್ಯಾಚರಣೆ ಗುಂಡಿನ ಚಕಮಕಿಯಾಗಿ ಮಾರ್ಪಟ್ಟಿತು ಎಂದು ಉನ್ನತ ಮೂಲಗಳು ಹೇಳಿವೆ.
Next Story