ಪಾಕ್ ಗಡಿಯಲ್ಲಿ ಶಂಕಾಸ್ಪದ ವ್ಯಕ್ತಿಯ ಬಂಧನ
ಅಮೃತಸರ, ಮಾ.1: ಪಂಜಾಬ್ನ ಫಿರೋಝ್ಪುರದ ಪಾಕಿಸ್ತಾನ ಗಡಿ ಭಾಗದಲ್ಲಿ ಬಟ್ಟೆ ಮಾರಾಟಗಾರನೆಂದು ಹೇಳಿಕೊಂಡಿದ್ದ ಶಂಕಾಸ್ಪದ ವ್ಯಕ್ತಿಯೊಬ್ಬನನ್ನು ಗಡಿಭದ್ರತಾ ಪಡೆ ಬಂಧಿಸಿದೆ ಎಂದು ವರದಿಯಾಗಿದೆ. ಬಂಧಿತ ವ್ಯಕ್ತಿಯನ್ನು ಉತ್ತರಪ್ರದೇಶದ ಮೊರಾದಾಬಾದ್ ನಿವಾಸಿ ಮುಹಮ್ಮದ್ ಶಾರೂಖ್ (21ವರ್ಷ) ಎಂದು ಗುರುತಿಸಲಾಗಿದೆ.
ಈತನ ಬಳಿಯಿದ್ದ ಮೊಬೈಲ್ ಫೋನ್ನಲ್ಲಿ ಶಂಕಾಸ್ಪದ ನಂಬರ್ಗಳಿದ್ದವು. ವಿಚಾರಣೆ ವೇಳೆ ಅಸಂಬದ್ಧವಾಗಿ ಉತ್ತರಿಸಿ ವಿರೋಧಾಭಾಸದ ಹೇಳಿಕೆ ನೀಡಿದ್ದ ಈತನನ್ನು ಹೆಚ್ಚಿನ ತನಿಖೆಗಾಗಿ ಪೊಲೀಸರ ವಶಕ್ಕೆ ನೀಡಲಾಗಿದೆ .
ಗಡಿಭಾಗದ ಸಮೀಪವಿರುವ ಗ್ರಾಮಗಳಲ್ಲಿ ಮೋಟರ್ಬೈಕ್ನಲ್ಲಿ ಈತ ಬೆಡ್ಶೀಟ್ಗಳನ್ನು ಮಾರಾಟ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದು ಈತನ ಬಳಿ 13 ಬೆಡ್ಶೀಟ್ಗಳಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story