ವಾಯು ದಾಳಿಯಲ್ಲಿ 250ಕ್ಕೂ ಹೆಚ್ಚು ಉಗ್ರರು ಹತ ಎಂದ ಅಮಿತ್ ಶಾ
ಅಹ್ಮದಾಬಾದ್, ಮಾ. 4 : ಭಾರತೀಯ ವಾಯು ಸೇನೆ ಇತ್ತೀಚೆಗೆ ಪಾಕಿಸ್ತಾನದಲ್ಲಿ ಉಗ್ರ ತಾಣಗಳ ಮೇಲೆ ನಡೆಸಿದ ವಾಯು ದಾಳಿಯಲ್ಲಿ 250ಕ್ಕೂ ಅಧಿಕ ಉಗ್ರರು ಹತರಾಗಿದ್ದಾರೆಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಲಕ್ಷ್ಯ ಜೀತೋ ಕಾರ್ಯಕ್ರಮವನ್ನುದ್ದೇಶಿಸಿ ಶಾ ಮಾತನಾಡುತ್ತಿದ್ದರು. ''ಐದು ವರ್ಷಗಳಲ್ಲಿ ಎರಡು ಪ್ರಮುಖ ಘಟನೆಗಳು ನಡೆದಿವೆ, ಉರಿ ಮತ್ತು ಪುಲ್ವಾಮ. ಉರಿ ದಾಳಿಯ ನಂತರ ನಮ್ಮ ಸೇನೆ ಪಾಕಿಸ್ತಾನ ಪ್ರವೇಶಿಸಿ ಸರ್ಜಿಕಲ್ ದಾಳಿ ನಡೆಸಿ ನಮ್ಮ ಸೈನಿಕರ ಸಾವಿಗೆ ಪ್ರತೀಕಾರ ತೀರಿಸಿದೆ. ಪುಲ್ವಾಮ ಉಗ್ರ ದಾಳಿಯ ನಂತರ, ಈ ಬಾರಿ ಸರ್ಜಿಕಲ್ ದಾಳಿ ನಡೆಸಲು ಸಾಧ್ಯವಿಲ್ಲವೆಂದು ಎಲ್ಲರೂ ಅಂದುಕೊಂಡರು. ಈಗ ಏನಾಗಬಹುದು ಎಂದು ಎಲ್ಲರೂ ಅಂದುಕೊಳ್ಳುತ್ತಿರುವಾಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಪುಲ್ವಾಮ ದಾಳಿ ನಡೆದ ನಂತರದ 13ನೇ ದಿನದಂದು ನಡೆಸಿದ ವಾಯು ದಾಳಿಯಲ್ಲಿ 250ಕ್ಕೂ ಹೆಚ್ಚು ಉಗ್ರರು ಬಲಿಯಾದರೆ ನಮ್ಮ ಕಡೆಯಲ್ಲಿ ಯಾವುದೇ ಹಾನಿಯುಂಟಾಗಿಲ್ಲ'' ಎಂದು ಶಾ ಹೇಳಿದರು.
Next Story