ಹರ್ಯಾಣದಲ್ಲಿ 5,910 ಶತಾಯುಷಿ ಮತದಾರರು
ಚಂಡೀಗಢ, ಮಾ.7: ಮುಂಬರುವ ಲೋಕಸಭಾ ಚುನಾವಣೆಗೆ ಮತದಾರರ ಪಟ್ಟಿ ಸಿದ್ದವಾಗುತ್ತಿದ್ದು, ಹರ್ಯಾಣದಲ್ಲಿ 5, 910 ಮಂದಿ ನೂರು ವರ್ಷ ದಾಟಿದ ಮತದಾರರಿದ್ದಾರೆ .
ಕರ್ನಲ್ ನಲ್ಲಿ 100 ವರ್ಷ ದಾಟಿದ ಮತದಾರರ ಸಂಖ್ಯೆ ಜಾಸ್ತಿ ಇದೆ. ಅಲ್ಲಿ 553 ಶತಾಯುಷಿಗಳಿದ್ದಾರೆ. ಪಂಚಕುಳದಲ್ಲಿ 111 ಮಂದಿ ನೂರರ ಹರೆಯದ ಮತದಾರರು ಮುಂದಿನ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ.
ಹರ್ಯಾಣದಲ್ಲಿ 89,711 ಮಂದಿ 90ರಿಂದ 99ರ ಹರೆಯದ ಮತದಾರರು ನೆಲೆಸಿದ್ದಾರೆ. ಈ ಪೈಕಿ ಗರಿಷ್ಠ 7,946 ಮತದಾರರು ಭಿವಾನಿಯಲ್ಲಿ ಮತ್ತು 1,436 ಪಂಚಕುಳದಲ್ಲಿ ಇದ್ದಾರೆ.
Next Story