ಅಕ್ಟೋಬರ್ನಿಂದ ನೂತನ ಚಾಲನಾ ಪರವಾನಿಗೆ, ನೋಂದಣಿ ಪ್ರಮಾಣಪತ್ರ
ಹೊಸದಿಲ್ಲಿ,ಮಾ.8: ಅಕ್ಟೋಬರ್ ಒಂದರಿಂದ ದೇಶಾದ್ಯಂತ ಸಾರಿಗೆ ಇಲಾಖೆಗಳು ನೀಡುವ ಚಾಲನಾ ಪರವಾನಿಗೆ (ಡಿಎಲ್) ಮತ್ತು ನೋಂದಣಿ ಪ್ರಮಾಣಪತ್ರಗಳು (ಆರ್ಸಿ) ಒಂದೇ ರೀತಿಯ ವಿನ್ಯಾಸ, ಬಣ್ಣ ಮತ್ತು ಭದ್ರತಾ ಅಂಶಗಳನ್ನು ಹೊಂದಲಿದೆ.
ನೂತನ ಡಿಎಲ್ ಮತ್ತು ಆರ್ಸಿಯಲ್ಲಿರುವ ಕ್ಯೂಆರ್ ಕೋಡ್ ಮೂಲಕ ವಾಹನ ಅಥವಾ ಚಾಲಕರ ಹಳೆಯ ದಾಖಲೆಗಳು ಕೇಂದ್ರ ಆನ್ಲೈನ್ ದತ್ತಾಂಶದಿಂದ ಕ್ಷಣ ಮಾತ್ರದಲ್ಲಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೂತನ ಸಮಾನ ನಿಯಮವನ್ನು ಪಾಲಿಸುವುದನ್ನು ರಾಜ್ಯಗಳಿಗೆ ಕಡ್ಡಾಯಗೊಳಿಸಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಇದಕ್ಕೆ ಹೆಚ್ಚುವರಿ ಭದ್ರತಾ ಅಂಶಗಳನ್ನು ಅಳವಡಿಸುವ ಸ್ವಾತಂತ್ರ ರಾಜ್ಯಗಳಿಗೆ ನೀಡಲಾಗಿದೆ. ಆದರೆ ಹೀಗೆ ಅಳವಾಡಿಸಲಾಗುವ ಇತರೆ ಭದ್ರತಾ ಅಂಶಗಳಲ್ಲಿ ಮುಂದಿನ ಹತ್ತು ವರ್ಷಗಳ ಕಾಲ ಚಾಲಕರು ಮತ್ತು ವಾಹನದ ಬಗ್ಗೆ ಮಾಹಿತಿ ಕೂಡಿಡುವ ಸಾಮರ್ಥ್ಯ ಇರಬೇಕಿದೆ ಎಂದು ಅಧಿಸೂಚನೆ ತಿಳಿಸಿದೆ.
Next Story