‘ಸೆಕ್ಸ್ಗೆ ಪದವಿ’ ಪ್ರಕರಣ: ಅಧ್ಯಾಪಕಿಗೆ ಜಾಮೀನು
ಮದುರೈ, ಮಾ. 13: ‘ಸೆಕ್ಸ್ಗೆ ಪದವಿ’ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ 11 ತಿಂಗಳ ಬಳಿಕ ಕಾಲೇಜೊಂದರ ಮಹಿಳಾ ಸಹ ಪ್ರಾಧ್ಯಾಪಕಿ ನಿರ್ಮಲಾ ದೇವಿಗೆ ಮದ್ರಾಸ್ ಉಚ್ಚ ನ್ಯಾಯಾಲಯ ಮಂಗಳವಾರ ಶರ್ತಬದ್ಧ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿ ಎನ್. ಕಿರುಬಕರನ್ ಹಾಗೂ ಎಸ್.ಎಸ್. ಸುಂದರ್ ಅವರಿದ್ದ ಮಧುರೈ ಪೀಠ ಅವರಿಗೆ ಜಾಮೀನು ನೀಡಿದೆ. ಅತಿ ಹೆಚ್ಚು ಅಂಕ ಹಾಗೂ ಹಣಕ್ಕಾಗಿ ದೇವಿ ವಿದ್ಯಾರ್ಥಿನಿಯರಿಗೆ ಆಮಿಷ ಒಡ್ಡಿ ಕಾಮರಾಜ ವಿಶ್ವವಿದ್ಯಾನಿಲಯದ ಹಿರಿಯ ಅಧಿಕಾರಿಗಳಿಗೆ ವಿದ್ಯಾರ್ಥಿನಿಯರನ್ನು ಪೂರೈಸುತ್ತಿದ್ದರು ಎಂದು ಆರೋಪಿಸಲಾಗಿದೆ.
ದೇವಿಗೆ ಜಾಮೀನು ನೀಡಲು ತನ್ನ ಯಾವುದೇ ಆಕ್ಷೇಪ ಇಲ್ಲ ಎಂದು ಸರಕಾರದ ಪರ ವಕೀಲರು ಹೇಳಿದರು.
ಪೊಲೀಸ್ ತನಿಖೆಗೆ ಸಂಪೂರ್ಣವಾಗಿ ಸಹಕರಿಸವಂತೆ ನ್ಯಾಯಮೂರ್ತಿಗಳು ನಿರ್ದೇಶ ನ ನೀಡಿದರು. ತನಿಖೆಗೆ ತೊಂದರೆ ಆಗುವುದರಿಂದ ಮಾಧ್ಯಮಗಳಿಗೆ ಯಾವುದೇ ರೀತಿಯ ಸಂದರ್ಶನ ನೀಡದಂತೆ ಅವರಿಗೆ ನಿಷೇಧ ವಿಧಿಸಿದರು.
Next Story