ನ್ಯೂಝಿಲ್ಯಾಂಡ್ ಮಸೀದಿಯಲ್ಲಿ ಉಗ್ರ ದಾಳಿ: ಕೇರಳದ ಮಹಿಳೆ ಮೃತ್ಯು
ತಿರುವನಂತಪುರ, ಮಾ. 16: ನ್ಯೂಝಿಲ್ಯಾಂಡ್ನಲ್ಲಿ ಶುಕ್ರವಾರ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ 49 ಮಂದಿಯಲ್ಲಿ ಕೇರಳದ ಮಹಿಳೆಯೋರ್ವರು ಕೂಡ ಸೇರಿದ್ದಾರೆ. ಈ ಮಹಿಳೆಯನ್ನು ಅನ್ಸಿಯಾ ಎಂದು ಗುರುತಿಸಲಾಗಿದೆ.
ಅವರು ಇಲ್ಲಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಎಂಟೆಕ್ ಶಿಕ್ಷಣ ಪಡೆಯುತ್ತಿದ್ದರು. ವರ್ಷಗಳ ಹಿಂದೆ ಅವರು ಇಲ್ಲಿಗೆ ಆಗಮಿಸಿದ್ದರು. ಘಟನೆಯಲ್ಲಿ ಅವರ ಪತಿ ನಝರ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಆ್ಯನ್ಸಿ ಕೊಡಂಗಲ್ಲೂರು ನಿವಾಸಿ. ಅವರ ಪತಿ ಕೊಚ್ಚಿಯ ಸಮೀಪದ ಮಾಡವನದ ನಿವಾಸಿ ಎಂದು ಮೂಲಗಳು ತಿಳಿಸಿವೆ.
Next Story