ಲೋಕಸಭಾ ಚುನಾವಣೆ: ತೆಲಂಗಾಣದ 8 ಮಂದಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್
ಹೈದರಾಬಾದ್, ಮಾ. 16: ತೆಲಂಗಾಣದ 17 ಲೋಕಸಭಾ ಸ್ಥಾನಗಳಲ್ಲಿ 8 ಸ್ಥಾನಗಳಿಗೆ ಕಾಂಗ್ರೆಸ್ ಶನಿವಾರ ಅಭ್ಯರ್ಥಿಗಳನ್ನು ಘೋಷಿಸಿದೆ. ಮಾಲ್ಕಂಗೇರಿ ಲೋಕಸಭಾ ಸ್ಥಾನಕ್ಕೆ ಕಾಂಗ್ರೆಸ್ನ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಎ. ರೇವಂತ್ ರೆಡ್ಡಿ ಅವವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಶುಕ್ರವಾರ ರಾತ್ರಿ ಪ್ರಕಟಿಸಿದ ಪಟ್ಟಿಯಲ್ಲಿ ರಾಜ್ಯದ 8 ಮಂದಿ ಅಭ್ಯರ್ಥಿಗಳ ಹೆಸರು ಇದೆ.
ರೇವಂತ್ ರೆಡ್ಡಿ ಅಲ್ಲದೆ ರಾಜ್ಯ ಪಟ್ಟಿಯಲ್ಲಿರುವ ಇತರ ಅಭ್ಯರ್ಥಿಗಳೆಂದರೆ ಮಾಜಿ ಸಂಸದ ರಮೇಶ್ ರಾಥೋಡ್, ಎ. ಚಂದ್ರಶೇಖರ್, ಪೊನ್ನಂ ಪ್ರಭಾಕರ್, ಕೆ. ಮದನ್ ಮೋಹನ್ ರಾವ್, ಗಾಲಿ ಅನಿಲ್ ಕುಮಾರ್, ಕೊಂಡ ವಿಶ್ವೇಶ್ವರ ರೆಡ್ಡಿ ಹಾಗೂ ಮಾಜಿ ಸಂಸದ ಪೂರಿಕಾ ಬಲರಾಮ್ ನಾಕ್.
Next Story