ಟ್ವಿಟರ್ ಖಾತೆಯ ಹೆಸರನ್ನು ‘ಚೌಕಿದಾರ್ ನರೇಂದ್ರ ಮೋದಿ’ ಎಂದು ಬದಲಿಸಿದ ಪ್ರಧಾನಿ
ಹೊಸದಿಲ್ಲಿ, ಮಾ.17: ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ Main Bhi Chowkidar ಎಂಬ ಕ್ಯಾಂಪೇನ್ ಆರಂಭಿಸಿದ ನಂತರ ಇಂದು ಪ್ರಧಾನಿ ಮೋದಿ ತಮ್ಮ ಟ್ವಿಟರ್ ಖಾತೆಯ ಹೆಸರನ್ನು ‘ಚೌಕಿದಾರ್ ನರೇಂದ್ರ ಮೋದಿ’ ಎಂದು ಬದಲಿಸಿದ್ದಾರೆ. ಇವರನ್ನೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಜೆಪಿ ನಡ್ಡಾ, ಹರ್ಷವರ್ಧನ್ ಮತ್ತು ಧರ್ಮೇಂದ್ರ ಪ್ರಧಾನ್ ಕೂಡ ಅನುಸರಿಸಿದ್ದಾರೆ.
ಮುಂದಿನ ತಿಂಗಳು ಲೋಕಸಭಾ ಚುನಾವಣೆ ಆರಂಭವಾಗಲಿದ್ದು, ಬಿಜೆಪಿ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಜನರನ್ನು ಸೆಳೆಯಲು ಪ್ರಯತ್ನಗಳನ್ನು ಆರಂಭಿಸಿದೆ.
Next Story