ಮನೋಹರ್ ಪಾರಿಕ್ಕರ್ ಆರೋಗ್ಯ ಸ್ಥಿತಿ ‘ಅತ್ಯಂತ ಗಂಭೀರ’: ಗೋವಾ ಸಿಎಂ ಕಚೇರಿ ಟ್ವೀಟ್
ಪಣಜಿ, ಮಾ.17: ಅನಾರೋಗ್ಯದಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಗೋವಾ ಸಿಎಂ ಕಚೇರಿ ತಿಳಿಸಿದೆ.
“ಮನೋಹರ್ ಪಾರಿಕ್ಕರ್ ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ. ವೈದ್ಯರು ಅವರ ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದಾರೆ” ಎಂದು ಸಿಎಂ ಕಚೇರಿಯ ಟ್ವಿಟರ್ ತಿಳಿಸಿದೆ.
Next Story