ಬ್ರಿಟಿಷರ ವಿರುದ್ಧ ಹೋರಾಡಿದ ಮೋದಿ ಹೇಗೆ ಸ್ವಾತಂತ್ರ್ಯ ತಂದುಕೊಟ್ಟರು ಎನ್ನುವುದನ್ನು ತೋರಿಸಿಲ್ಲ
‘ಪಿಎಂ ನರೇಂದ್ರ ಮೋದಿ’ ಟ್ರೈಲರ್ ಬಗ್ಗೆ ನಟ ಸಿದ್ಧಾರ್ಥ್ ವ್ಯಂಗ್ಯ
ಚೆನ್ನೈ, ಮಾ.21: ವಿವೇಕ್ ಒಬೆರಾಯ್ ನಟನೆಯ ಪ್ರಧಾನಿ ನರೇಂದ್ರ ಮೋದಿಯವರ ಜೀವನವನ್ನಾಧರಿಸಿದ ಚಿತ್ರ ‘ಪಿಎಂ ನರೇಂದ್ರ ಮೋದಿ’ಯ ಟ್ರೈಲರ್ ಬಿಡುಗಡೆಯಾಗಿದ್ದು, ಬಹುಭಾಷಾ ನಟ ಸಿದ್ಧಾರ್ಥ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
“ಬ್ರಿಟಿಷ್ ಸಾಮ್ರಾಜ್ಯವನ್ನು ಒಂದೇ ಕೈಯಲ್ಲಿ ನಿರ್ನಾಮ ಮಾಡುವ ಮೂಲಕ ಮೋದಿಜಿ ಹೇಗೆ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು ಎನ್ನುವುದನ್ನು ‘ಪಿಎಂ ನರೇಂದ್ರ ಮೋದಿ’ ಟ್ರೈಲರ್ ನಲ್ಲಿ ತೋರಿಸಿಲ್ಲ. ಸಿಕ್ಯುಲರ್, ಲಿಬ್ಟರ್ಡ್, ಕಮ್ಮಿ, ನಕ್ಸಲ್ ಹಾಗು ಆ ನೆಹರೂ ಅವರ ಕೆಳಮಟ್ಟದ ಕುತಂತ್ರ ಎಂದು ತೋಚುತ್ತಿದೆ” ಎಂದು ಸಿದ್ಧಾರ್ಥ್ ಪಿಎಂ ನರೇಂದ್ರ ಮೋದಿ ಟ್ರೈಲರ್ ಬಗ್ಗೆ ಕುಹಕವಾಡಿದ್ದಾರೆ.
ಪ್ರಧಾನಿಯವರ ಬಾಲ್ಯ, ರಾಜಕೀಯ ಪ್ರವೇಶ, ವೈಯಕ್ತಿಕ ಜೀವನ ಹೀಗೆ ಹಲವು ಅಂಶಗಳು ಚಿತ್ರದಲ್ಲಿರಲಿವೆ ಎನ್ನಲಾಗಿದೆ. ಚಿತ್ರದಲ್ಲಿ ಇತರ ನಟರಾದ ಬೊಮಾನ್ ಇರಾನಿ, ಮನೋಜ್ ಜೋಶಿ ಹಾಗು ಝರೀನಾ ವಹಾಬ್ ಸೇರಿ ಹಲವರು ನಟಿಸಿದ್ದಾರೆ.
ಈ ಹಿಂದೆ ಮೇರಿ ಕೋಮ್ ಮತ್ತು ಸರಬ್ಜಿತ್ ಚಿತ್ರಗಳನ್ನು ನಿರ್ದೇಶಿಸಿದ್ದ ಒಮುಂಗ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
#PMNarendraModiTrailer does not show how #Modiji won India's Independence by single handedly wiping out the British Empire. Looks like another cheap trick by the sickular, libtard, commie, naxals and of course that Nehru. #IstandwithModi
— Siddharth (@Actor_Siddharth) March 21, 2019