ಬಿಹಾರದಲ್ಲಿ ಶತ್ರುಘ್ನ ಸಿನ್ಹ ಕ್ಷೇತ್ರದಲ್ಲಿ ರವಿಶಂಕರ್ ಪ್ರಸಾದ್ಗೆ ಟಿಕೆಟ್
ಪಾಟ್ನ, ಮಾ.23: ಬಿಹಾರದ 40 ಲೋಕಸಭಾ ಕ್ಷೇತ್ರಗಳಲ್ಲಿ 39 ಕ್ಷೇತ್ರಗಳಿಗೆ ಎನ್ಡಿಎ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಪಕ್ಷವನ್ನು ನಿರಂತರ ಟೀಕಿಸುತ್ತಾ ಬಂದಿರುವ ಹಿರಿಯ ಮುಖಂಡ ಶತ್ರುಘ್ನ ಸಿನ್ಹ ಪ್ರತಿನಿಧಿಸುವ ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ರನ್ನು ಕಣಕ್ಕಿಳಿಸಿದೆ.
ಬಿಹಾರದ ಬಿಜೆಪಿ ಉಸ್ತುವಾರಿ ಭೂಪೇಂದ್ರ ಯಾದವ್ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದರು. ಲೋಕಜನಶಕ್ತಿ (ಎಲ್ಜೆಪಿ) ಪಕ್ಷದ ಪಾಲಾಗಿರುವ ಖಗಾರಿಯಾ ಕ್ಷೇತ್ರದ ಅಭ್ಯರ್ಥಿಯನ್ನು ಕೆಲವೇ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಯಾದವ್ ತಿಳಿಸಿದರು. 40 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಜೆಡಿಯು ತಲಾ 17 ಸ್ಥಾನ, ರಾಮವಿಲಾಸ್ ಪಾಸ್ವಾನರ ಲೋಕಜನಶಕ್ತಿ ಪಕ್ಷಕ್ಕೆ 6 ಸ್ಥಾನ ಸಂದಿದೆ. ಪಾಸ್ವಾನರ ಪುತ್ರ ಚಿರಾಗ್ ಪಾಸ್ವಾನ್ ಜಮೂಯ್ನಿಂದ, ಬಿಜೆಪಿ ಮುಖಂಡ, ಕೇಂದ್ರ ಸಚಿವ ರಾಧಾಮೋಹನ್ ಸಿಂಗ್ ಪೂರ್ವ ಚಂಪಾರಣ್ನಿಂದ, ರಾಜೀವ್ಪ್ರತಾಪ್ ರೂಡಿ ಸರಾನ್ ಕ್ಷೇತ್ರದಿಂದ, ಗಿರಿರಾಜ್ ಸಿಂಗ್ ಬೆಗುಸರಾಯ್ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ.