ಮಸೂದ್ ಅಝರ್ ರಕ್ಷಣೆಯನ್ನು ಸಮರ್ಥಿಸಿಕೊಂಡ ಚೀನಾ
ಬೀಜಿಂಗ್, ಮಾ. 29: ಭಯೋತ್ಪಾದಕ ಗುಂಪು ಜೈಶೆ ಮುಹಮ್ಮದ್ನ ಸ್ಥಾಪಕ ಮಸೂದ್ ಅಝರ್ನನ್ನು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಅಂತರ್ರಾಷ್ಟ್ರೀಯ ಸಮುದಾಯದ ಪ್ರಯತ್ನಗಳನ್ನು ಪದೇ ಪದೇ ತಡೆಯವ ತನ್ನ ಕೃತ್ಯವನ್ನು ಚೀನಾ ಶುಕ್ರವಾರ ಸಮರ್ಥಿಸಿಕೊಂಡಿದೆ ಹಾಗೂ ತನ್ನ ಕೃತ್ಯವು ಹಿಂಸಾನಿರತ ಗುಂಪುಗಳನ್ನು ದಿಗ್ಬಂಧನಗಳಿಂದ ರಕ್ಷಿಸುವುದಕ್ಕೆ ಸಮವಾಗಿದೆ ಎಂಬ ಅಮೆರಿಕದ ಆರೋಪವನ್ನೂ ಅದು ತಳ್ಳಿಹಾಕಿದೆ.
ವಿಶ್ವಸಂಸ್ಥೆಯ ದಿಗ್ಬಂಧನ ಸಮಿತಿಯಲ್ಲಿ ತಾಂತ್ರಿಕ ತಡೆಯನ್ನು ವಿಧಿಸುವುದು ಸಮಿತಿಯ ನಿಯಮಗಳಿಗೆ ಅನುಗುಣವಾಗಿದೆ ಎಂದು ಚೀನಾದ ವಿದೇಶ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡುತ್ತಾ ಹೇಳಿದರು.
Next Story