ಗಡಿ ಸಮೀಪ ಹಾರಾಡಿದ ಬೃಹತ್ ಡ್ರೋನ್, ಪಾಕಿಸ್ತಾನದ ನಾಲ್ಕು ಯುದ್ಧವಿಮಾನಗಳು
ಹೊಸದಿಲ್ಲಿ,ಎ.1: ಪಂಜಾಬ್ನ ಖೇಮಕರನ್ ವಿಭಾಗದಲ್ಲಿ ಸೋಮವಾರ ನಸುಕಿನಲ್ಲಿ ಗಡಿಗೆ ಸಮೀಪದಲ್ಲಿ ಬೃಹತ್ ಡ್ರೋನ್ ಮತ್ತು ಪಾಕಿಸ್ತಾನದ ನಾಲ್ಕು ಎಫ್-16 ಯುದ್ಧವಿಮಾನಗಳ ಹಾರಾಟವನ್ನು ಭಾರತೀಯ ರಾಡಾರ್ಗಳು ಪತ್ತೆ ಹಚ್ಚಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಭಾರತೀಯ ವಾಯುಪಡೆಯು ತನ್ನ ಎರಡು ಸುಖೋಯಿ-30 ಎಂಕೆಐ ಮತ್ತು ಮಿರಾಜ್ ಜೆಟ್ ವಿಮಾನಗಳನ್ನು ಕಾರ್ಯಾಚರಣೆಯಲ್ಲಿ ತೊಡಗಿಸಿದ್ದು,ಇದನ್ನು ಗಮನಿಸಿದ ಪಾಕಿಸ್ತಾನದ ಯುದ್ಧವಿಮಾನಗಳು ಪಲಾಯನಗೈದವು ಎಂದು ಅದು ತಿಳಿಸಿದೆ. ನಸುಕಿನ ಮೂರು ಗಂಟೆಗೆ ಈ ಘಟನೆ ನಡೆದಿದೆ.
ಕಳೆದ ತಿಂಗಳು ಎರಡು ಪಾಕಿಸ್ತಾನಿ ವಿಮಾನಗಳು ಪಾಕ್ ಆಕ್ರಮಿತ ಕಾಶ್ಮೀರದ ಪ್ರದೇಶದಲ್ಲಿ ನಿಯಂತ್ರಣ ರೇಖೆಯಿಂದ 10 ಕಿ.ಮೀ.ದೂರದಲ್ಲಿ ಶಬ್ದಾತೀತ ವೇಗದಲ್ಲಿ ಹಾರುತ್ತಿದ್ದನ್ನು ಪತ್ತೆಹಚ್ಚಲಾಗಿತ್ತು.
Next Story