ಬಾಂಬ್ ತಯಾರಿಕೆ ಸಾಮಗ್ರಿ, ಶಸ್ತ್ರಾಶ್ತ್ರ ವಶ: ಓರ್ವನ ಬಂಧನ
ತೋಟದಲ್ಲಿ ಅಡಗಿಸಿಟ್ಟಿದ್ದ ರಾಜಾರಾಮ್
ಪುಣೆ, ಎ. 3: ಮಹಾರಾಷ್ಟ್ರದ ಪುಣೆಯ ಮನೆಯೊಂದರಿಂದ ಭಾರೀ ಪ್ರಮಾಣದ ಬಾಂಬ್ ತಯಾರಿಕೆ ಸಾಮಗ್ರಿಗಳು, ಸ್ಫೋಟಕಗಳು ಹಾಗೂ ಶಶ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ 71ರ ಹರೆಯದ ರಾಜಾರಾಮ್ ಅಭಂಗ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪುಣೆ ಗ್ರಾಮೀಣ ಪೊಲೀಸ್ ಉಗ್ರ ನಿಗ್ರಹ ಘಟಕದ ಅಧಿಕಾರಿ ತಿಳಿಸಿದ್ದಾರೆ.
ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಜುನ್ನಾರ್ನ ತೋಟವೊಂದರಲ್ಲಿ ಇರುವ ಅಭಂಗ್ನ ಗುಡಿಸಲಿನ ಮೇಲೆ ಪೊಲೀಸರು ಮಂಗಳವಾರ ದಾಳಿ ನಡೆಸಿದರು. ಈ ಸಂದರ್ಭ ಭಾರೀ ಪ್ರಮಾಣದ ಬಾಂಬ್ ತಯಾರಿಕೆ ಸಾಮಗ್ರಿ, ದೇಶಿ ನಿರ್ಮಿತ ಪಿಸ್ತೂಲ್, ಪೈಪ್ ಬಾಂಬ್, ಕೆಲವು ಡಿಟೊನೋಟರ್ ಹಾಗೂ ಗನ್ ಪೌಡರ್ ಪತ್ತೆಯಾಯಿತು ಎಂದು ಅವರು ತಿಳಿಸಿದ್ದಾರೆ.
ಕೆಲವು ಹರಿತ ಆಯುಧಗಳು, ಬ್ಯಾಟರಿಗಳ ಸೇರಿದಂತೆ ಇಲೆಕ್ಟ್ರಾನಿಕ್ಸ್ ಉಪಕರಣಗಳು, ಕಬ್ಬಿಣದ ರಕ್ಷಾ ಕವಚ ಹಾಗೂ ಕಬ್ಬಿಣದ ಶಿರಸ್ತ್ರಾಣ ಮೊದಲಾದವು ಕೂಡ ಇಲ್ಲಿ ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ.
Next Story