ಬಿಜೆಪಿಯ ಬ್ಯಾಂಕ್ ಖಾತೆಯಿಂದ ತೆಗೆದಿದ್ದ 8 ಕೋಟಿ ರೂ. ವಶಪಡಿಸಿಕೊಂಡ ಪೊಲೀಸರು
ಕಾರಿನಲ್ಲಿ ಸಾಗಾಟ ಮಾಡುತ್ತಿದ್ದಾಗ ಆರಕ್ಷಕರ ಬಲೆಗೆ
ಹೊಸದಿಲ್ಲಿ, ಎ.8: ಬಿಜೆಪಿಯ ರಾಜ್ಯ ಘಟಕದ ಬ್ಯಾಂಕ್ ಖಾತೆಯಿಂದ ವಿತ್ ಡ್ರಾ ಮಾಡಲಾಗಿದೆ ಎನ್ನಲಾದ 8 ಕೋಟಿ ರೂ.ಗಳನ್ನು ಹೈದರಾಬಾದ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. 8 ಕೋಟಿ ರೂ. ವಿತ್ ಡ್ರಾ ಮಾಡಿದ ಚೆಕ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಲಕ್ಷ್ಮಣ್ ರ ಸಹಿ ಇದೆ ಎನ್ನಲಾಗಿದೆ.
2 ಕೋಟಿ ರೂ. ಸಾಗಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ತಡೆಯಲಾಯಿತು. ಇಂಡಿಯನ್ ಬ್ಯಾಂಕ್ ನ ನಂದಿರಾಜು ಗೋಪಿ ಎಂಬವರು ತಮಗೆ ಈ ಹಣ ನೀಡಿದ್ದಾಗಿ ಇಬ್ಬರು ಹೇಳಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಬ್ಯಾಂಕ್ ಗೆ ತೆರಳಿದಾಗ 6 ಕೋಟಿ ರೂ. ಪತ್ತೆಯಾಗಿದೆ. ಬ್ಯಾಂಕ್ ನಲ್ಲಿದ್ದ ನಂದಿರಾಜು ಗೋಪಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈತ ಬಿಜೆಪಿಯ ಕಚೇರಿ ಸಹಾಯಕ ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿ 7 ಮಂದಿಯನ್ನು ಬಂಧಿಸಲಾಗಿದೆ.
Next Story