ದಿಲ್ಲಿಯಲ್ಲಿ ಕಾಂಗ್ರೆಸ್ ಏಕಾಂಗಿ ಹೋರಾಟ: ಶೀಲಾ ದೀಕ್ಷಿತ್ ಸ್ಪರ್ಧೆ
ಹೊಸದಿಲ್ಲಿ, ಎ.22: ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಆಮ್ ಆದ್ಮಿ ಪಕ್ಷದೊಂದಿಗೆ ಮೈತ್ರಿಕೊಳ್ಳದೇ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದು, ಏಳು ಕ್ಷೇತ್ರಗಳ ಪೈಕಿ ಆರು ಕ್ಷೇತ್ರದ ಅಭ್ಯರ್ಥಿಗಳ ಹೆಸರುಗಳನ್ನು ಸೋಮವಾರ ಪ್ರಕಟಿಸಿದೆ. ದಿಲ್ಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಈಶಾನ್ಯ ದಿಲ್ಲಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಜೆ.ಪಿ. ಅಗರ್ವಾಲ್(ಚಾಂದಿನಿ ಚೌಕ್), ಅರ್ವಿಂದರ್ ಸಿಂಗ್ ಲವ್ಲಿ(ಪೂರ್ವ ದಿಲ್ಲಿ), ಅಜಯ್ ಮಾಕನ್(ಹೊಸದಿಲ್ಲಿ), ರಾಜೇಶ್ ಲಲೊಥಿಯಾ(ವಾಯುವ್ಯ ದಿಲ್ಲಿ) ಹಾಗೂ ಮಹಾಬಲ ಮಿಶ್ರಾ(ಪಶ್ಚಿಮ ದಿಲ್ಲಿ)ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದಾರೆ.
Next Story