ರಾಹುಲ್ ಗಾಂಧಿ ನಾಮಪತ್ರ ಸಿಂಧು ಎಂದ ಚುನಾವಣಾ ಅಧಿಕಾರಿ
ಅಮೇಠಿ, ಎ.22: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಲ್ಲಿಸಿರುವ ನಾಮಪತ್ರ ಸಿಂಧು ಎಂದು ಸೋಮವಾರ ಚುನಾವಣಾ ಅಧಿಕಾರಿ ಘೋಷಿಸಿದ್ದಾರೆ.
ರಾಹುಲ್ ಸ್ಪರ್ಧಿಸುತ್ತಿರುವ ಉತ್ತರಪ್ರದೇಶದ ಅಮೇಠಿ ಲೋಕಸಭಾ ಕ್ಷೇತ್ರದ ರಿಟರ್ನಿಂಗ್ ಆಫೀಸರ್ ರಾಮ್ ಮನೋಹರ್ ಜೋಶಿ ನಾಮಪತ್ರ ಪರಿಶೀಲನೆಯನ್ನು ಸೋಮವಾರಕ್ಕೆ ನಿಗದಿಪಡಿಸಿದ್ದರು. ರಾಹುಲ್ರ ಪೌರತ್ವ ಹಾಗೂ ವಿದ್ಯಾರ್ಹತೆಯನ್ನು ಆಕ್ಷೇಪಿಸಿ ರಾಹುಲ್ ವಿರುದ್ಧ ಸ್ಪರ್ಧಿಸುತ್ತಿರುವ ಪಕ್ಷೇತರ ಅಭ್ಯರ್ಥಿ ಧುೃವ್ ಲಾಲ್ ಸಹಿತ ನಾಲ್ವರು, ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದರು. ಹೀಗಾಗಿ ರಾಹುಲ್ ಪ್ರತಿನಿಧಿ ರಾಹುಲ್ ಕೌಶಿಕ್ ಪ್ರತಿಕ್ರಿಯೆ ನೀಡಲು ಸಮಯಾವಕಾಶ ಕೇಳಿದ್ದು, ಚುನಾವಣಾಧಿಕಾರಿ ಸೋಮವಾರ ಬೆಳಗ್ಗೆ 10:30ರ ತನಕ ಕಾಲಾವಕಾಶ ನೀಡಿದ್ದರು.
Next Story