ಅಹ್ಮದಾಬಾದ್ನಲ್ಲಿ ಮತ ಚಲಾಯಿಸಿದ ಪ್ರಧಾನಿ ಮೋದಿ
ಅಹ್ಮದಾಬಾದ್, ಎ.23: ಪ್ರಧಾನಮಂತ್ರಿ ನರೇಂದ್ರ ಮೋದಿ ಗುಜರಾತ್ನ ಅಹ್ಮದಾಬಾದ್ನಲ್ಲಿ ಮಂಗಳವಾರ ಮತ ಚಲಾಯಿಸಿದರು. ಬುಲೆಟ್ ಪ್ರೂಫ್ ವಾಹನದ ಬದಲಿಗೆ ತೆರೆದ ಮಿನಿ ಜೀಪ್ನಲ್ಲಿ ರೋಡ್ಶೋ ನಡೆಸಿದ ಮೋದಿ ರಾನಿಪ್ನ ನಿಶಾನ್ ಹೈಯರ್ ಸೆಕೆಂಡರಿ ಸ್ಕೂಲ್ನಲ್ಲಿ ಮತ ಚಲಾಯಿಸಿದರು. ಆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.
‘‘ಭಯೋತ್ಪಾದಕರಿಗೆ ಐಇಡಿ ಅಸ್ತ್ರವಾಗಿದ್ದರೆ, ವೋಟರ್ ಐಡಿ ಪ್ರಜಾಪ್ರಭುತ್ವದ ಶಕ್ತಿಯಾಗಿದೆ. ವೋಟರ್ ಐಡಿ ನಿಶ್ಚಿತವಾಗಿ ಐಇಡಿಗಿಂತ ಅತ್ಯಂತ ಶಕ್ತಿಶಾಲಿಯಾಗಿದೆ ಎಂದು ಹೇಳಬಲ್ಲೆ. ನಾವು ವೋಟರ್ ಐಡಿಯ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ’’ಎಂದರು.
ಮತ ಚಲಾಯಿಸಿದ ಬಳಿಕ ಶಾಯಿ ಇರುವ ಬೆರಳನ್ನು ಪ್ರದರ್ಶಿಸಿದ ಮೋದಿ ಅಹ್ಮದಾಬಾದ್ ಪೂರ್ವ ಕ್ಷೇತ್ರದ ಅಭ್ಯರ್ಥಿ ಹಸ್ಮುಖ್ಭಾಯ್ ಸೋಮಭಾಯ್ ಪಟೇಲ್ರೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗಿ ಮತದಾರರತ್ತ ಕೈಬೀಸಿದರು.
Next Story