3ನೆ ಹಂತದ ಮತದಾನ: ದೇಶದ ವಿವಿಧೆಡೆ ಕೈಕೊಟ್ಟ ಇವಿಎಂ | Vartha Bharati- ವಾರ್ತಾ ಭಾರತಿ

---

ವಿಪಕ್ಷಗಳ ಆಕ್ರೋಶ

3ನೆ ಹಂತದ ಮತದಾನ: ದೇಶದ ವಿವಿಧೆಡೆ ಕೈಕೊಟ್ಟ ಇವಿಎಂ

ಹೊಸದಿಲ್ಲಿ, ಎ.23: ಮಂಗಳವಾರ ನಡೆದ ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನದ ಸಂದರ್ಭ ಇವಿಎಂ ಅಸಮರ್ಪಕ ಕಾರ್ಯನಿರ್ವಹಣೆಯ ಬಗ್ಗೆ ವ್ಯಾಪಕ ದೂರು ವರದಿಯಾಗಿದೆ. 116 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮತದಾನ ನಡೆಸಲು ಬೃಹತ್ ಪ್ರಮಾಣದಲ್ಲಿ ಮತದಾರರು ಉತ್ಸಾಹದಿಂದ ಪಾಲ್ಗೊಂಡಿದ್ದು ಕೇರಳ, ಉತ್ತರ ಪ್ರದೇಶ ಮತ್ತು ಗೋವಾದಲ್ಲಿ ಇವಿಎಂ ಅವ್ಯವಸ್ಥೆಯ ಬಗ್ಗೆ ದೂರು ಕೇಳಿ ಬಂದಿದೆ.

ಮೂರನೇ ಹಂತದ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಹಲವು ಕೇಂದ್ರ ಸಚಿವರು ಸ್ಪರ್ಧಾ ಕಣದಲ್ಲಿದ್ದಾರೆ.

ಇವಿಎಂಗಳು ದೇಶದಾದ್ಯಂತ ಅಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆ ಅಥವಾ ಬಿಜೆಪಿಗೆ ಮಾತ್ರ ಮತ ಚಲಾವಣೆಯಾಗುವಂತೆ ನೋಡಿಕೊಳ್ಳುತ್ತಿವೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆರೋಪಿಸಿದ್ದು ಇದು ದಂಡಾರ್ಹ ನಿರ್ಲಕ್ಷದ ಪ್ರಕರಣವಾಗಿದೆ ಎಂದು ಬಣ್ಣಿಸಿದ್ದಾರೆ. ಮತಗಟ್ಟೆ ಅಧಿಕಾರಿಗಳಿಗೆ ಇವಿಎಂಗಳ ನಿರ್ವಹಣೆಯ ಕುರಿತು ಸೂಕ್ತ ತರಬೇತಿ ನೀಡಲಾಗಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. 350ಕ್ಕೂ ಹೆಚ್ಚು ಇವಿಎಂಗಳನ್ನು ಬದಲಾಯಿಸಲಾಗಿದೆ. ಸುಮಾರು 50 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಡೆಯುವ ಮತದಾನ ಪ್ರಕ್ರಿಯೆಯಲ್ಲಿ ಇದು ದಂಡಾರ್ಹ ನಿರ್ಲಕ್ಷವಾಗಿದೆ ಎಂದು ಯಾದವ್ ಟ್ವೀಟ್ ಮಾಡಿದ್ದಾರೆ.

ಬದೌನ್‌ನಲ್ಲಿ ಉತ್ತರಪ್ರದೇಶದ ಸಚಿವರೊಬ್ಬರು (ಅವರ ಪುತ್ರಿ ಇಲ್ಲಿ ಸ್ಪರ್ಧಿಸುತ್ತಿದ್ದಾರೆ) ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸಿರುವ ಬಗ್ಗೆ ಮಾಹಿತಿ ದೊರೆತಿದೆ. ಮತಗಟ್ಟೆ ಸಿಬ್ಬಂದಿಗಳಿಗೆ ತರಬೇತಿ ಇಲ್ಲದ ಕಾರಣ ಇವಿಎಂಗಳು ಅಸಮರ್ಪಕವಾಗಿ ಕಾರ್ಯ ನಿರ್ವಹಿಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸರಕಾರ ಭರವಸೆ ನೀಡಿದ ಡಿಜಿಟಲ್ ಇಂಡಿಯಾ ಎಂದರೆ ಇದೇ ಆಗಿರಬಹುದೇ ಎಂದವರು ಪ್ರಶ್ನಿಸಿದ್ದಾರೆ.

ಕೇರಳ: ಇವಿಎಂಗಳಲ್ಲಿ ತಾಂತ್ರಿಕ ದೋಷ

ಕೇರಳದ ಅಳಪ್ಪುಝ ಜಿಲ್ಲೆಯ ಚೆರ್ತಳ ಮತ್ತು ತಿರುವನಂತಪುರಂನ ಕೋವಲಂ ಜಿಲ್ಲೆಯ ಕೆಲವು ಮತಗಟ್ಟೆಗಳ ಇವಿಎಂಗಳಲ್ಲಿ ತಾಂತ್ರಿಕ ದೋಷದ ಬಗ್ಗೆ ಆರೋಪ ಕೇಳಿ ಬಂದಿದೆ. ಆದರೆ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಟೀಕಾರಾಂ ಮೀನಾ ಇದನ್ನು ನಿರಾಕರಿಸಿದ್ದಾರೆ. ಇವಿಎಂಗಳಲ್ಲಿ ತಾಂತ್ರಿಕ ದೋಷ ಕಂಡು ಬರುವುದು ಹೊಸದೇನೂ ಅಲ್ಲ. ಕಳೆದ ರಾತ್ರಿ ಹಲವೆಡೆ ಮಳೆಯಾಗಿದೆ. ಸಮಸ್ಯೆಗೆ ಇದು ಕಾರಣವಾಗಿರಬಹುದು ಎಂದವರು ಹೇಳಿದ್ದಾರೆ.

ಸಂಜೆಯ ವೇಳೆಗೆ 21 ವರ್ಷದ ವ್ಯಕ್ತಿಯೊಬ್ಬ ತಾನು ಮತ ಚಲಾಯಿಸಿದ ಬೂತ್‌ನಲ್ಲಿ ಇವಿಎಂ ದೋಷಪೂರ್ಣವಾಗಿದೆ ಎಂದು ಸುಳ್ಳು ದೂರು ದಾಖಲಿಸಿದ ಕಾರಣ ಅವನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಿರುವನಂತಪುರಂ ಸಂಸದೀಯ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಮತ ಚಲಾಯಿಸಿದ ಬಾಬು ಎಂಬಾತ ತಾನು ಚಲಾಯಿಸಿದ ಮತ ತಪ್ಪಾದ ಅಭ್ಯರ್ಥಿಗೆ ಹೋಗಿರುವುದು ವಿವಿಪ್ಯಾಟ್‌ನಲ್ಲಿ ಸಾಬೀತಾಗಿದೆ ಎಂದು ದೂರು ನೀಡಿದ. ಆದರೆ ಮತಗಟ್ಟೆ ಅಧಿಕಾರಿ ಮತ್ತು ಪೋಲಿಂಗ್ ಏಜೆಂಟರ ಉಪಸ್ಥಿತಿಯಲ್ಲಿ ಪರೀಕ್ಷಾ ಮತದಾನ ನಡೆದಾಗ ಈತನ ಆರೋಪ ಸಾಬೀತಾಗಲಿಲ್ಲ. ಬಳಿಕ ಆತನನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.

ಗುಜರಾತ್: ಹಲವು ಮತಗಟ್ಟೆಗಳಲ್ಲಿ ಇವಿಎಂಗಳಲ್ಲಿ ದೋಷ ಕಂಡು ಬಂದಿರುವುದಾಗಿ ಚುನಾವಣಾಧಿಕಾರಿ ತಿಳಿಸಿದ್ದಾರೆ. ಕೆಲವು ಮತಗಟ್ಟೆಗಳಲ್ಲಿ ಇವಿಎಂ ಬದಲಾಯಿಸಿರುವುದಾಗಿ ಮುಖ್ಯ ಚುನಾವಣಾಧಿಕಾರಿ ಅಶೋಕ್ ಮಾನೆಕ್ ತಿಳಿಸಿದ್ದಾರೆ.

ಗೋವಾ: ಹಲವೆಡೆ ಮತಯಂತ್ರಗಳು ದೋಷಪೂರ್ಣ ಕಾರ್ಯ ನಿರ್ವಹಿಸಿವೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ ಕೇಜ್ರೀವಾಲ್ ದೂರಿದ್ದಾರೆ. ‘ಚುನಾವಣೆ ಅಥನಾ ನಾಚಿಕೆ. ಗೋವಾದ 34 ಎಸಿಯ ಮತಗಟ್ಟೆ ನಂ. 31ರಲ್ಲಿ ಎಲ್ಲಾ 6 ಅಭ್ಯರ್ಥಿಗಳ ಹೆಸರಲ್ಲೂ 9 ಅಣಕು ಮತದಾನ ಮಾಡಲಾಗಿದೆ. ಇದರಲ್ಲಿ ಬಿಜೆಪಿ ಅಭ್ಯರ್ಥಿ 17, ಕಾಂಗ್ರೆಸ್ 9, ಆಪ್ 8, ಪಕ್ಷೇತರ ಅಭ್ಯರ್ಥಿ 1 ಮತ ಗಳಿಸಿದ್ದಾರೆ. ಇದೊಂದು ಡಕಾಯಿತಿ’ ಎಂದು ಆಪ್ ಪಕ್ಷದ ಗೋವಾ ವಿಭಾಗದ ಸಂಚಾಲಕ ಎಲ್ವಿಸ್ ಗೋಮ್ಸ್ ಅವರ ಟ್ವೀಟ್ ಅನ್ನು ಕೇಜ್ರೀವಾಲ್ ಶೇರ್ ಮಾಡಿಕೊಂಡಿದ್ದಾರೆ. ದೂರು ಕೇಳಿ ಬಂದ ಬಳಿಕ ಕೆಲವು ಬೂತ್‌ಗಳ ಮತಯಂತ್ರಗಳನ್ನು ಬದಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಡಿಶಾ: ಬದಂಬ ವಿಧಾನಸಭಾ ಕ್ಷೇತ್ರದ ಬೂತ್ ನಂ. 196ರಲ್ಲಿ ಮತದಾನ ಆರಂಭವಾದ ಕೆಲ ಹೊತ್ತಿನಲ್ಲೇ ವಿವಿಪ್ಯಾಟ್‌ನಲ್ಲಿ ದೋಷ ಕಂಡು ಬಂದ ಕಾರಣ ವಿವಿಪ್ಯಾಟ್ ಅನ್ನು ಬದಲಿಸಲಾಯಿತು. ಅದುವರೆಗೆ 134 ಮತ ಚಲಾವಣೆಯಾಗಿದೆ ಎಂದು ಒಡಿಶಾದ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ. ಇಲ್ಲಿ ಸಂಸದೀಯ ಕ್ಷೇತ್ರಕ್ಕೆ ನಿಗದಿಯಾಗಿದ್ದ ವಿವಿಪ್ಯಾಟ್ ಯಂತ್ರವನ್ನು ವಿಧಾನಸಭಾ ಕ್ಷೇತ್ರಕ್ಕೆ ನಿಗದಿಯಾಗಿದ್ದ ಇವಿಎಂಗೆ ಸಂಪರ್ಕಿಸಿದ್ದು ಸಮಸ್ಯೆಗೆ ಕಾರಣವಾಗಿದೆ ಎಂದವರು ಸ್ಪಷ್ಟಪಡಿಸಿದ್ದಾರೆ. ಹೊಸ ಮತದಾನಕ್ಕೆ ಶಿಫಾರಸು ಮಾಡಲಾಗಿದೆ ಎಂದವರು ತಿಳಿಸಿದ್ದಾರೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top