ಅಡುಗೆ ಅನಿಲ ಬೆಲೆ ಹೆಚ್ಚಳ
ಹೊಸದಿಲ್ಲಿ,ಮೇ 1:ಇಂದಿನಿಂದ ದೇಶದಾದ್ಯಂತ ಅಡುಗೆ ಅನಿಲ ದರ ಹೆಚ್ಚಳವಾಗಿದೆ. ಸಬ್ಸಿಡಿ ಬೆಲೆಯ 14.2 ಕಿಲೊಗ್ರಾಮ್ನ ಸಿಲಿಂಡರ್ ಗೆ 0.28 ರೂಪಾಯಿ ಹೆಚ್ಚಳವಾಗಿದೆ. ಇದು ದಿಲ್ಲಿಯ ಲೆಕ್ಕವಾದರೆ ಮುಂಬೈಯಲ್ಲಿ 0.29 ರೂಪಾಯಿ ಬೆಲೆ ಹೆಚ್ಚಳವಾಗಿದೆ.
ಸಬ್ಸಿಡಿಯ ಸಿಲಿಂಡರ್ ಗೆ ಮೇ.1ರ ನಂತರದ ದರದ ವಿವರ ಹೀಗಿದೆ:
ಮೆಟ್ರೊ ದಿಲ್ಲಿಯಲ್ಲಿ 14,2 ಕಿಲೊಗ್ರಾಂ ಸಿಲಿಂಡರ್ ಗೆ 496.14ರೂ., ಕೊಲ್ಕತಾದಲ್ಲಿ 499.29 ರೂ., ಮುಂಬೈಯಲ್ಲಿ 493.86 ರೂ., ಚೆನ್ನೈಯಲ್ಲಿ 484.02ರೂ. ಆಗಿದ್ದು, ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ಗೆ ಉಭಯ ನಗರಗಳಲ್ಲಿ 6 ರೂ. ಹೆಚ್ಚಳವಾಗಿದೆ. ದಿಲ್ಲಿಯಲ್ಲಿ 712.50 ರೂ., ಕೊಲ್ಕತಾದಲ್ಲಿ 738.50 ರೂ., ಮುಂಬೈಯಲ್ಲಿ 684.50 ರೂ. ಚೆನ್ನೈಯಲ್ಲಿ 728 ರೂ. ದರವಾಗಿದೆ.
ಈ ವರ್ಷ ಈವರೆಗೆ ಸಬ್ಸಿಡಿ ರಹಿತ ಸಿಲಿಂಡರ್ ಗೆ 96-98.5 ರೂ.ವರೆಗೆ ದರ ಕಡಿತವಾಗಿತ್ತು.
Next Story