ಗುಜರಾತ್ ಬಿಜೆಪಿ ಮುಖ್ಯಸ್ಥ ಜಿತು ವಘಾನಿಗೆ ಚುನಾವಣಾ ಪ್ರಚಾರಕ್ಕೆ 72 ಗಂಟೆಗಳ ನಿಷೇಧ
ಹೊಸದಿಲ್ಲಿ, ಮೇ 1: ಗುಜರಾತ್ ಬಿಜೆಪಿ ಘಟಕದ ಅಧ್ಯಕ್ಷ ಜಿತು ವಘಾನಿ ಅವರಿಗೆ ಚುನಾವಣಾ ಆಯೋಗವು 72 ಗಂಟೆಗಳ ಕಾಲ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗದಂತೆ ನಿಷೇಧ ವಿಧಿಸಿದೆ.
ವಘಾನಿ ಅವರು ಸೂರತ್ ನ ಅಮ್ರೊಲಿಯಲ್ಲಿ ಎ.7ರಂದು ಪಕ್ಷದ ಕಾರ್ಯಕರ್ತರ ಹಾಗೂ ಮತದಾರರ ಸಭೆಯಲ್ಲಿ ತನ್ನ ಭಾಷಣದಲ್ಲಿ ಅಸಹ್ಯ ಮತ್ತು ನಿಂದನೀಯ ಪದಗಳನ್ನು ಬಳಿಸಿದ ಕಾರಣಕ್ಕಾಗಿ ಅವರಿಗೆ ಪ್ರಚಾರಕ್ಕೆ ನಿಷೇಧ ವಿಧಿಸಲಾಗಿದೆ. ಮೇ 2 ಸಂಜೆ 4ಗಂಟೆಯಿಂದ ನಿಷೇಧ ಜಾರಿಗೆ ಬರಲಿದೆ. ಈ ಅವಧಿಯಲ್ಲಿ ವಘಾನಿಗೆ ದೇಶದ ಯಾವುದೇ ಭಾಗದಲ್ಲಿ ಸಾರ್ವಜನಿಕ ಸಭೆ, ರ್ಯಾಲಿ, ರೋಡ್ ಶೋದಲ್ಲಿ ಭಾಗವಹಿಸಿ ಮಾತನಾಡುವಂತಿಲ್ಲ.
ಗುಜರಾತ್ ನಲ್ಲಿ ಲೋಕಸಭಾ ಚುನಾವಣೆಯ ಮತದಾನ ಎಪ್ರಿಲ್ 23ರಂದು ನಡೆದಿತ್ತು.
Next Story