ಮತ್ತೊಬ್ಬ ಆಪ್ ಶಾಸಕ ಬಿಜೆಪಿಗೆ ಸೇರ್ಪಡೆ
ಹೊಸದಿಲ್ಲಿ, ಮೇ 6: ಆಮ್ ಆದ್ಮಿ ಪಕ್ಷದ ಶಾಸಕ ದೇವಿಂದರ್ ಸಿಂಗ್ ಸೆಹ್ರಾವತ್ ಸೋಮವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ಆಪ್ ನ 2 ಶಾಸಕರು ಒಂದು ವಾರದೊಳಗೆ ಬಿಜೆಪಿ ಸೇರ್ಪಡೆಗೊಂಡಂತಾಗಿದೆ.
ಇದಕ್ಕೂ ಮೊದಲು ಅನಿಲ್ ಬಾಜಪೈ ಬಿಜೆಪಿ ಸೇರಿದ್ದರು. ಕೇಂದ್ರ ಸಚಿವ ವಿಜಯ್ ಗೋಯಲ್ ಸಮ್ಮುಖದಲ್ಲಿ ದೇವೀಂದರ್ ಸಿಂಗ್ ಬಿಜೆಪಿಗೆ ಸೇರ್ಪಡೆಗೊಂಡರು.
“ಆಪ್ ನ ಸ್ಥಾಪಕ ಸದಸ್ಯರಲ್ಲಿ ನಾನೂ ಒಬ್ಬ. ಕಳೆದ 3 ವರ್ಷಗಳಿಂದ ನನ್ನನ್ನು ಕಡೆಗಣಿಸಲಾಗುತ್ತಿದೆ ಮತ್ತು ನನ್ನ ಕ್ಷೇತ್ರದ ಅಗತ್ಯತೆಗಳನ್ನು ಕಡೆಗಣಿಸಲಾಗುತ್ತಿದೆ” ಎಂದು ಸೆಹ್ರಾವತ್ ಆರೋಪಿಸಿದರು.
Next Story