ನೋಟ್ ಬ್ಯಾನ್, ಜಿಎಸ್ ಟಿ ಹೆಸರಲ್ಲಿ ಚುನಾವಣೆ ಎದುರಿಸಿ: ಮೋದಿಗೆ ಪ್ರಿಯಾಂಕಾ ಸವಾಲು
ಹೊಸದಿಲ್ಲಿ, ಮೇ 8: ಉಳಿದಿರುವ 2 ಹಂತಗಳ ಚುನಾವಣೆಯನ್ನು ನೋಟ್ ಬ್ಯಾನ್, ಜಿಎಸ್ ಟಿ ಮತ್ತು 2014ರಲ್ಲಿ ನೀಡಿದ್ದ ಭರವಸೆಗಳ ಹೆಸರಿನಲ್ಲಿ ಎದುರಿಸುವಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸವಾಲೆಸೆದಿದ್ದಾರೆ.
ಚುನಾವಣೆಯನ್ನು ರಾಜೀವ್ ಗಾಂಧಿಯವರ ಹೆಸರಿನಲ್ಲಿ ಎದುರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಗೆ ಸವಾಲೆಸೆದ ನಂತರ ಪ್ರಿಯಾಂಕ ಈ ಹೇಳಿಕೆ ನೀಡಿದ್ದಾರೆ.
ಶೀಲಾ ದೀಕ್ಷಿತ್ ರನ್ನು ಬೆಂಬಲಿಸಿ ದಿಲ್ಲಿಯಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಪ್ರಿಯಾಂಕಾ, “ನಾನು ನಿಮಗೆ ಬಹಿರಂಗ ಸವಾಲೆಸೆಯುತ್ತಿದ್ದೇನೆ. ನೋಟ್ ಬ್ಯಾನ್, ಜಿಎಸ್ ಟಿ, ಮಹಿಳಾ ಸುರಕ್ಷತೆಯ ಹೆಸರಿನಲ್ಲಿ ನೀವು ಚುನಾವಣೆಯನ್ನು ಎದುರಿಸಿ” ಎಂದು ಹೇಳಿದರು.
Next Story