ಶಿಮ್ಲಾದ ಮೊದಲ ಬ್ರಿಟಿಷ್ ಕಾಲದ ಗ್ರಾಂಡ್ ಹೊಟೇಲ್ನಲ್ಲಿ ಬೆಂಕಿ ಅನಾಹುತ
ಶಿಮ್ಲಾ, ಮೇ 13: ಹಿಮಾಚಲಪ್ರದೇಶದ ಶಿಮ್ಲಾದಲ್ಲಿರುವ ಬ್ರಿಟಿಷ್ ಕಾಲದ, ನೂರು ವರ್ಷ ಹಳೆಯ ಗ್ರಾಂಡ್ ಹೊಟೇಲ್ನಲ್ಲಿ ಸೋಮವಾರ ರಾತ್ರಿ ಹೊತ್ತಿಕೊಂಡ ಬೆಂಕಿಗೆ ಹೊಟೇಲ್ ಪ್ರಮುಖ ಭಾಗ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗಷ್ಟೆ ನವೀಕರಣಗೊಳಿಸಲಾಗಿರುವ ಮಯೋ ಬ್ಲಾಕ್ನ ಮೂರು ಮಹಡಿಗಳಲ್ಲಿ ಬೆಂಕಿ ಹತ್ತಿಕೊಂಡಿದೆ. ರಾತ್ರಿ 12:30ರ ಸುಮಾರಿಗೆ ಹೆರಿಟೇಜ್ ಗ್ರಾಂಡ್ ಹೊಟೇಲ್ನ ರಿಸೆಪ್ಶನ್ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಸೋಮವಾರ ಬೆಳಗ್ಗೆ 3ರ ಸುಮಾರಿಗೆ ಬೆಂಕಿಯನ್ನು ಹತೋಟಿಗೆ ತರಲಾಗಿದೆ.
‘‘ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದ ಕಾನ್ಸ್ಟೇಬಲ್ಗಳು ಬೆಂಕಿ ಘಟನೆಯನ್ನು ಮೊದಲಿಗೆ ಗಮನಿಸಿದ್ದರು. ತಕ್ಷಣವೇ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬೆಂಕಿ ಹೊತ್ತಿಕೊಂಡಾಗ ಕಟ್ಟಡದಲ್ಲಿ ಸಿಬ್ಬಂದಿಯಿರಲಿಲ್ಲ’’ ಎಂದು ಶಿಮ್ಲಾ ಪೊಲೀಸ್ ಅಧೀಕ್ಷಕ ಒಮಾಪತಿ ಜಮ್ವಾಲ್ ಹೇಳಿದ್ದಾರೆ.
Next Story