ಭಾರತದ ಮತ್ತೊಬ್ಬ ಪರ್ವತಾರೋಹಿ ಸಾವು
ಕಠ್ಮಂಡು, ಮೇ 17: ವಿಶ್ವದ ಐದನೇ ಅತೀ ಎತ್ತರದ ಪರ್ವತವಾಗಿರುವ ನೇಪಾಳದ ಮಕಾಲು ಪರ್ವತವನ್ನು ಏರಿ ಕೆಳಗಿಳಿಯುತ್ತಿದ್ದ ಸಂದರ್ಭ ಭಾರತದ ಪರ್ವತಾರೋಹಿ ಸಾವನ್ನಪ್ಪಿರುವುದಾಗಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
8,485 ಮೀಟರ್ ಎತ್ತರದ ಮಕಾಲು ಪರ್ವತದ ಶಿಖರವನ್ನು ತಲುಪಿದ್ದ ನಾರಾಯಣ್ ಸಿಂಗ್ ಎಂಬ ಪರ್ವತಾರೋಹಿ, ಬಳಿಕ ಕೆಳಗಿಳಿಯುತ್ತಿದ್ದ ಸಂದರ್ಭ ಗುರುವಾರ ಸಂಜೆ 4 ಗಂಟೆಯ ವೇಳೆಗೆ ಮೃತಪಟ್ಟಿರುವುದಾಗಿ ನೇಪಾಳದ ಪ್ರವಾಸೋದ್ಯಮ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಬುಧವಾರ ಭಾರತದ ಇಬ್ಬರು ಪರ್ವತಾರೋಹಿಗಳು ಕಾಂಚನ್ ಜುಂಗ ಪರ್ವತ ಏರುವ ಸಂದರ್ಭ ಅಸ್ವಸ್ಥಗೊಂಡು ಮೃತಪಟ್ಟಿದ್ದರು. ಕಳೆದ ಮೂರು ದಿನದಲ್ಲಿ ಮೂವರು ಭಾರತೀಯ ಪರ್ವತಾರೋಹಿಗಳು ಮೃತಪಟ್ಟಂತಾಗಿದೆ.
Next Story