ಆರು ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ
ಆಲ್ವಾರ್: ದಲಿತ ಮಹಿಳೆಯ ಅತ್ಯಾಚಾರ ಪ್ರಕರಣ
ಅಲ್ವಾರ್, ಮೇ 18: ಆಲ್ವಾರ್ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ರಾಜಸ್ಥಾನ ಪೊಲೀಸರು 6 ಮಂದಿ ವಿರುದ್ಧದ ಆರೋಪ ಪಟ್ಟಿಯನ್ನು ಶನಿವಾರ ಇಲ್ಲಿನ ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಇಲ್ಲಿನ ಥಾನಾಗಾಜಿ ಪ್ರದೇಶದಲ್ಲಿ ಎಪ್ರಿಲ್ 26ರಂದು ಐವರು ದುಷ್ಕರ್ಮಿಗಳ ಗುಂಪೊಂದು ದಲಿತ ವ್ಯಕ್ತಿಯೋರ್ವನನ್ನು ಕಟ್ಟಿ ಹಾಕಿ ಆತನ ಪತ್ನಿ ಮೇಲೆ ಅತ್ಯಾಚಾರ ಎಸಗಿತ್ತು. ಈ ಪೈಶಾಚಿಕ ಘಟನೆಯನ್ನು ಓರ್ವ ವೀಡಿಯೊ ಚಿತ್ರೀಕರಿಸಿದ್ದ ಹಾಗೂ ಅದನ್ನು ಸಾಮಾಜಿಕ ಜಾಲ ತಾಣದಲ್ಲಿ ಪ್ರಸಾರ ಮಾಡಿದ್ದ.
ಪೋಷಕ ದಾಖಲೆಗಳು ಹಾಗೂ ಸಾಕ್ಷಗಳೊಂದಿಗೆ 500 ಪುಟಗಳ ಆರೋಪ ಪಟ್ಟಿಯನ್ನು ಆಲ್ವಾರ್ನ ಎಡಿಜಿ ಎಸ್ಸಿ, ಎಸ್ಟಿ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿದ್ದಾರೆ. ‘‘6 ಮಂದಿ ಆರೋಪಿಗಳ ವಿರುದ್ಧ ಇಂದು ನಾವು ಆರೋಪ ಪಟ್ಟಿಯನ್ನು ನ್ಯಾಯಾಲಯದ ಮುಂದೆ ಸಲ್ಲಿಸಿದ್ದೇವೆ. ವೀಡಿಯೊ ವೈರಲ್ ಮಾಡಿರುವುದಕ್ಕೆ ಆರನೇ ಆರೋಪಿಯ ವಿರುದ್ಧ ಐಟಿ ಕಾಯ್ದೆ ಅಡಿಯಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದೇವೆ’’ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.
Next Story