ಮಂಗಳವಾರದಿಂದ ಅಮೂಲ್ ಹಾಲಿನ ಬೆಲೆ ಏರಿಕೆ
ಹೊಸದಿಲ್ಲಿ, ಮೇ 20: ಉತ್ಪಾದನಾ ವೆಚ್ಚದಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಅಮೂಲ್ ತನ್ನ ಪ್ರತಿ ಲೀಟರ್ ಹಾಲಿಗೆ ಮಂಗಳವಾರದಿಂದ 2 ರೂ. ಏರಿಕೆ ಮಾಡಿದೆ ಎಂದು ಅಮೂಲ್ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಈ ಹಿಂದೆ 2017ರಲ್ಲಿ ಅಮೂಲ್ ತನ್ನ ಹಾಲಿನ ಬೆಲೆಯಲ್ಲಿ ಏರಿಕೆ ಮಾಡಿತ್ತು.
ಹಾಲಿನ ಬೆಲೆ ಏರಿಕೆಯಾಗುವ ರಾಜ್ಯಗಳಲ್ಲಿ ಗುಜರಾತ್, ಪಶ್ಚಿಮಬಂಗಾಳ, ದಿಲ್ಲಿ-ಎನ್ಸಿಆರ್, ಕೋಲ್ಕೊತ್ತಾ, ಉತ್ತರಾಖಂಡ ಹಾಗೂ ಮಹಾರಾಷ್ಟ್ರ ಸೇರಿವೆ ಎಂದು ಗುಜರಾತ್ ಕೋಆಪರೇಟಿವ್ ಮಿಲ್ಕ್ ಮಾರ್ಕೇಟಿಂಗ್ ಫೆಡರೇಶನ್ ಹೇಳಿದೆ. ಇದರೊಂದಿಗೆ 500 ಮಿಲ್ಲಿ ಲೀಟರ್ನ ‘ಅಮೂಲ್ ಗೋಲ್ಡ್ ನ ಬೆಲೆ ಅಹ್ಮದಾಬಾದ್ನಲ್ಲಿ ರೂ. 27ಕ್ಕೆ ಏರಿಕೆಯಾಗಲಿದೆ. ‘ಅಮೂಲ್ ಶಕ್ತಿ’ಗೆ ರೂ. 25, ‘ಅಮೂಲ್ ತಾಜಾ’ಕ್ಕೆ ರೂ. 21 ‘ಅಮೂಲ್ ಡೈಮಂಡ್’ಗೆ ರೂ. 28 ಆಗಲಿದೆ ಎಂದು ಅದು ಹೇಳಿದೆ.
Next Story