ಬಿಹಾರ ವಿಧಾನಸಭಾ ಉಪ ಚುನಾವಣೆ: ಎರಡೂ ಸ್ಥಾನಗಳನ್ನು ಗೆದ್ದ ಎನ್ಡಿಎ
ಪಾಟ್ನಾ,ಮೇ 23: ಬಿಹಾರ ವಿಧಾನಸಭಾ ಉಪಚುನಾವಣೆ ನಡೆದ ಎರಡೂ ಕ್ಷೇತ್ರಗಳನ್ನು ಎನ್ಡಿಎ ಗೆದ್ದುಕೊಂಡಿದೆ.
ಡೆಹ್ರಿ ಕ್ಷೇತ್ರವನ್ನು ಆರ್ಜೆಡಿಯಿಂದ ಕಿತ್ತುಕೊಂಡಿರುವ ಬಿಜೆಪಿ ಅಭ್ಯರ್ಥಿ ಸತ್ಯನಾರಾಯಣ ಸಿಂಗ್ ಅವರು ಎದುರಾಳಿ ಮುಹಮ್ಮದ್ ಫಿರೋಝ್ ಹುಸೇನ್ ಅವರನ್ನು ಪರಾಭವಗೊಳಿಸಿದ್ದಾರೆ.
ಅತ್ತ ನವಾಡಾ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಯು ಅಭ್ಯರ್ಥಿ ಕೌಶಲ ಯಾದವ ಅವರು ಮಹಾಘಟಬಂಧನ್ ಅಭ್ಯರ್ಥಿ ಧೀರೇಂದ್ರ ಕುಮಾರ ಸಿನ್ಹಾ(ಎಹ್ಎಎಂ) ಅವರನ್ನು ಸೋಲಿಸಿದ್ದಾರೆ.
Next Story