ಪೆಟ್ರೋಲ್,ಡೀಸೆಲ್ ಬೆಲೆಗಳಲ್ಲಿ ಅಲ್ಪ ಏರಿಕೆ
ಹೊಸದಿಲ್ಲಿ,ಮೇ 24: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಶುಕ್ರವಾರ ಅಲ್ಪ ಏರಿಕೆಯನ್ನು ಮಾಡಲಾಗಿದ್ದು,ಬೆಳಿಗ್ಗೆ ಆರು ಗಂಟೆಯಿಂದಲೇ ಅನುಷ್ಠಾನಗೊಂಡಿದೆ.
ಪ್ರತಿ ಲೀ.ಪೆಟ್ರೋಲ್ ಬೆಲೆಯನ್ನು ದಿಲ್ಲಿಯಲ್ಲಿ 71.39 ರೂ.ಗೆ ಮತ್ತು ಮುಂಬೈನಲ್ಲಿ 77 ರೂ.ಗೆ ಪರಿಷ್ಕರಿಸಲಾಗಿದ್ದು, ಗುರುವಾರದ ಬೆಲೆಗೆ ಹೋಲಿಸಿದರೆ 14 ಪೈಸೆ ಏರಿಕೆಯಾಗಿದೆ. ಪ್ರತಿ ಲೀ.ಡೀಸಿಲ್ ಬೆಲೆಯನ್ನು ದಿಲ್ಲಿಯಲ್ಲಿ 66.45 ರೂ.ಗೆ ಮತ್ತು ಮುಂಬೈನಲ್ಲಿ 69.63 ರೂ.ಗೆ ಪರಿಷ್ಕರಿಸಲಾಗಿದ್ದು,ಅನುಕ್ರಮವಾಗಿ 16 ಮತ್ತು 17 ಪೈಸೆ ಏರಿಕೆಯಾಗಿದೆ.
Next Story