ಮಾಂಸ ಸಾಗಾಟ ಆರೋಪ: ಮಹಿಳೆ ಸಹಿತ ಮೂವರಿಗೆ ಥಳಿತ; ಐವರ ಬಂಧನ
ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಬಲವಂತ
ಭೋಪಾಲ್, ಮೇ 25: ಮಾಂಸ ಸಾಗಿಸುತ್ತಿದ್ದ ಆರೋಪದಲ್ಲಿ ಮುಸ್ಲಿಂ ಪುರುಷ ಮತ್ತು ಮಹಿಳೆ ಸೇರಿದಂತೆ ಮೂವರಿಗೆ ಜನರ ಗುಂಪೊಂದು ಹಲ್ಲೆ ನಡೆಸುತ್ತಿದ್ದ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಪೊಲೀಸರು ಶುಕ್ರವಾರ ಐವರನ್ನು ಬಂಧಿಸಿದ್ದಾರೆ.
ಗೋರಕ್ಷಕರೆಂದು ಹೇಳಿಕೊಳ್ಳುತ್ತಿದ್ದ ಗುಂಪು, ಮೂವರಿಗೆ ಥಳಿಸಿದ್ದಲ್ಲದೆ ಜೈ ಶ್ರೀರಾಮ್ ಘೋಷಣೆ ಕೂಗುವಂತೆಯೂ ಬಲವಂತಪಡಿಸಿತ್ತು. ಘಟನೆ ಮೇ 22 ರಂದು ನಡೆದಿದ್ದು, ವಿಡಿಯೋ ವೈರಲ್ ಆದ ಬಳಿಕ ಹಲ್ಲೆಗೊಳಗಾದ ಮೂವರ ಸಂಬಂಧಿಯೊಬ್ಬರು ಕೇಸ್ ದಾಖಲಿಸಿದ ಬಳಿಕ ಪೊಲೀಸರು ಎಚ್ಚೆತ್ತುಕೊಂಡಿದ್ದರು.
‘‘ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿ ಯೋಗೇಶ್, ದೀಪೇಶ್ ನಾಮ್ದೇವ್, ರೋಹಿತ್ ಯಾದವ್ ಹಾಗ ಶ್ಯಾಮ್ ಅವರನ್ನು ಬಂಧಿಸಲಾಗಿದೆ. ಐವರ ವಿರುದ್ಧ ಐಪಿಸಿ ಸೆಕ್ಷನ್ 143, 148, 149, 341, 294, 323 ಹಾಗೂ 506ನ್ನು, ಸಶಸ್ತ್ರ ಕಾಯ್ದೆ 25ನ್ನು ವಿಧಿಸಲಾಗಿದೆ ಎಂದು ಡುಂಡಾ ಸೆಯೊನಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Next Story