ದೇಶಕ್ಕಾಗಿ ನೆಹರೂ ಜಿ ಸಲ್ಲಿಸಿದ ಕೊಡುಗೆಗಳನ್ನು ನೆನಪಿಸಿಕೊಳ್ಳುತ್ತೇವೆ: ಪ್ರಧಾನಿ ಮೋದಿ ಟ್ವೀಟ್
ಹೊಸದಿಲ್ಲಿ, ಮೇ 27: ಭಾರತದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂ ಅವರ ಪುಣ್ಯತಿಥಿಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದು, ದೇಶಕ್ಕಾಗಿ ಅವರು ಸಲ್ಲಿಸಿದ ಕೊಡುಗೆಯನ್ನು ನೆನಪಿಸಿಕೊಳ್ಳುತ್ತೇವೆ ಎಂದಿದ್ದಾರೆ.
“ಪುಣ್ಯತಿಥಿಯಂದು ಪಂಡಿತ್ ಜವಹರಲಾಲ್ ನೆಹರೂ ಜಿಯವರಿಗೆ ಗೌರವಗಳು. ದೇಶಕ್ಕಾಗಿ ಅವರು ಸಲ್ಲಿಸಿದ ಕೊಡುಗೆಗಳನ್ನು ನಾವು ನೆನಪಿಸಿಕೊಳ್ಳುತ್ತೇವೆ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಇದೇ ಸಂದರ್ಭ ರಾಜ್ ನಾಥ್ ಸಿಂಗ್ ಕೂಡ ನೆಹರೂ ಬಗ್ಗೆ ಟ್ವೀಟ್ ಮಾಡಿದ್ದು, “ಪುಣ್ಯತಿಥಿಯಂದು ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂ ಅವರು ನಮ್ಮ ಸಮಾಜ ಮತ್ತು ದೇಶಕ್ಕೆ ನೀಡಿದ ಕೊಡುಗೆಗಳ ಬಗ್ಗೆ ನೆನಪಿಸಿಕೊಳ್ಳುತ್ತೇವೆ” ಎಂದಿದ್ದಾರೆ.
“ಪಂಡಿತ್ ಜವಹರಲಾಲ್ ನೆಹರೂ ಜಿಯವರಿಗೆ ಪ್ರಣಾಮಗಳು. ಆಧುನಿಕ ಭಾರತ ನಿರ್ಮಾಣಕ್ಕಾಗಿ ನೀಡಿದ ಕೊಡುಗೆಗಳಿಗಾಗಿ ಅವರು ಎಂದಿಗೂ ನೆನಪಿನಲ್ಲುಳಿಯುತ್ತಾರೆ” ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಟ್ವೀಟ್ ಮಾಡಿದ್ದಾರೆ.
Tributes to Pandit Jawaharlal Nehru Ji on his death anniversary. We remember his contributions to our nation.
— Narendra Modi (@narendramodi) May 27, 2019
Tributes to Pandit Jawaharlal Nehru Ji on his death anniversary today. He will always be remembered for his contributions to building a modern India. #PanditNehru pic.twitter.com/EbUbyaNikv
— VicePresidentOfIndia (@VPSecretariat) May 27, 2019