ನೆಹರೂ, ರಾಜೀವ್ ಗಾಂಧಿಯಂತೆ ಮೋದಿ ವರ್ಚಸ್ವಿ ನಾಯಕ ಎಂದ ರಜಿನಿಕಾಂತ್
ರಾಹುಲ್ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿದ್ದು ಹೀಗೆ…
ಚೆನ್ನೈ, ಮೇ 28: ನರೇಂದ್ರ ಮೋದಿಯವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ತಾನು ಭಾಗವಹಿಸುತ್ತಿದ್ದೇನೆ ಎಂದು ಖಚಿತಪಡಿಸಿರುವ ಸೂಪರ್ ಸ್ಟಾರ್ ರಜಿನಿಕಾಂತ್, “ಜವಹರಲಾಲ್ ನೆಹರೂ, ರಾಜೀವ್ ಗಾಂಧಿಯಂತೆ ಪ್ರಧಾನಿ ಮೋದಿಯೂ ವರ್ಚಸ್ವಿ ನಾಯಕ” ಎಂದಿದ್ದಾರೆ.
2ನೆ ಬಾರಿ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮದಲ್ಲಿ ತಮಿಳುನಾಡಿನ ನಟರು ಮತ್ತು ರಾಜಕಾರಣಿಗಳಾದ ಕಮಲ್ ಹಾಸನ್ ಮತ್ತು ರಜಿನಿಕಾಂತ್ ರನ್ನು ಆಹ್ವಾನಿಸಲಾಗಿತ್ತು.
“ಇದು ಮೋದಿಯವರ ಗೆಲುವು, ಅವರು ವರ್ಚಸ್ವಿ ನಾಯಕ. ಭಾರತದಲ್ಲಿ ನೆಹರೂ ಮತ್ತು ರಾಜೀವ್ ಗಾಂಧಿಯ ನಂತರ ಮೋದಿ ವರ್ಚಸ್ವಿ ನಾಯಕ” ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಜಿನಿಕಾಂತ್ ಹೇಳಿದರು.
ಇದೇ ಸಂದರ್ಭ ರಾಹುಲ್ ಗಾಂಧಿ ಬಗ್ಗೆ ಮಾತನಾಡಿದ ಅವರು, “ಅವರು (ರಾಹುಲ್) ರಾಜೀನಾಮೆ ನೀಡಬಾರದು. ಅವರಿಗೂ ಸಾಧಿಸಲು ಸಾಧ್ಯ ಎಂದು ಅವರು ನಿರೂಪಿಸಬೇಕು. ಪ್ರಜಾಪ್ರಭುತ್ವದಲ್ಲಿ ವಿಪಕ್ಷಗಳೂ ಪ್ರಬಲವಾಗಿರಬೇಕು” ಎಂದರು.
Next Story