ಹೃತಿಕ್ ಚಿತ್ರದ ಸಹ ನಟರನ್ನು ಉಗ್ರರೆಂದು ಬಂಧಿಸಿದ ಪೊಲೀಸರು
ಮುಂಬೈ: ಉಗ್ರರೆಂದು ತಿಳಿದುಕೊಂಡು ತಾವು ವಸಾಯ್ ಪ್ರದೇಶದಿಂದ ಬಂಧಿಸಿದ ಇಬ್ಬರು ಉಗ್ರರಲ್ಲ. ಬದಲಾಗಿ ಉಗ್ರರ ಪೋಷಾಕಿನಲ್ಲಿದ್ದ ಸಿನೆಮಾ ನಟರು ಎಂದು ತಿಳಿದು ಮುಂಬೈ ಪೊಲೀಸರು ಬೇಸ್ತು ಬಿದ್ದಿದ್ದಾರೆ.
ಹೃತಿಕ್ ರೋಶನ್ ಹಾಗೂ ಟೈಗರ್ ಶ್ರಾಫ್ ಅಭಿನಯದ ಚಿತ್ರದ ಸೆಟ್ ಪಕ್ಕದ ಪ್ರದೇಶದಲ್ಲಿ ಬಾಂಬರುಗಳ ಪೋಷಾಕಿನಲ್ಲಿದ್ದ ಇಬ್ಬರು ಅತ್ತಿತ್ತ ತಿರುಗಾಡುತ್ತಾ ಸಿಗರೇಟ್ ಖರೀದಿಸುತ್ತಿರುವುದುನ್ನು ಗಮನಿಸಿದ ಸ್ಥಳೀಯರು ಅವರು ಉಗ್ರರಿರಬೇಕೆಂಬ ಭೀತಿಯಿಂದ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೊನೆಗೆ ಪೊಲೀಸರು ಸುಮಾರು ಒಂದು ಗಂಟೆ ಹುಡುಕಾಡಿ ಇಬ್ಬರನ್ನೂ ಸೆರೆ ಹಿಡಿದಿದ್ದರು. ಅವರನ್ನು ಬಲರಾಮ್ ಗಿನ್ವಾಲ (23) ಹಾಗೂ ಅರ್ಬಾಝ್ ಖಾನ್ (20) ಎಂದು ಗುರುತಿಸಲಾಗಿದೆ.
ವಿಚಾರಿಸಿದಾಗ ಇವರಿಬ್ಬರೂ ಚಿತ್ರ ನಟರೆಂದು ತಿಳಿದು ಬಂದಿತ್ತು. ಚಿತ್ರ ನಿರ್ಮಾಣ ತಂಡ ಕೂಡ ಅವರಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಪ್ರಸ್ತುತ ಪಡಿಸಿ ಅವರಿಬ್ಬರು ಚಿತ್ರೀಕರಣದಲ್ಲಿ ಭಾಗವಹಿಸಿದವರೆಂದು ಸಾಬೀತು ಪಡಿಸಿತು.
ಇಷ್ಟೆಲ್ಲಾ ಆದರೂ ಜನರಲ್ಲಿ ಭೀತಿ ಹುಟ್ಟಿಸಿದ್ದಕ್ಕಾಗಿ ಇಬ್ಬರ ವಿರುದ್ಧವೂ ಐಪಿಸಿ ಸೆಕ್ಷನ್ 188 ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಘಟನೆ ಟ್ವಿಟ್ಟರ್ ನಲ್ಲಿ ಸಾಕಷ್ಟು ಸ್ವಾರಸ್ಯಕರ ಟ್ವೀಟ್ ಗಳಿಗೆ ಸ್ಫೂರ್ತಿಯಾಯಿತು.
After an hour-long search operation, #Mumbai police arrested 2 men suspected to be terrorists, but later turned out to be extras on the sets of Hrithik Roshan and Tiger Shroff's upcoming action film. #TV9News pic.twitter.com/o74uib9PQQ
— Tv9 Gujarati (@tv9gujarati) 29 May 2019