ಗಾಂಧೀಜಿ, ನೆಹರೂವನ್ನು ಸಲಿಂಗಕಾಮಿಗಳು ಎಂದ ಮೋದಿ ಬೆಂಬಲಿಗ ಲೇಖಕಿ ಮಧುಕೀಶ್ವರ್
ಬಲಪಂಥೀಯ ಚಿಂತಕಿ, ಕಟ್ಟಾ ಮೋದಿ ಬೆಂಬಲಿಗ ಲೇಖಕಿ ಮಧುಕೀಶ್ವರ್ ಅವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗು ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರನ್ನು ಸಲಿಂಗಕಾಮಿಗಳು ಎಂದು ಬಣ್ಣಿಸಿರುವ ಆಘಾತಕಾರಿ ಬೆಳವಣಿಗೆ ರವಿವಾರ ನಡೆದಿದೆ. ಈ ಬಗ್ಗೆ ಎಲ್ಲೆಡೆಯಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ರವಿವಾರ ಟ್ವೀಟ್ ಮಾಡಿರುವ ಮಧುಕೀಶ್ವರ್, " ಗಾಂಧಿ ಮೇಲೆ ನೆಹರೂಗೆ ಅಷ್ಟೊಂದು ಅಸಾಮಾನ್ಯ ಹಿಡಿತ ಇದ್ದಿದ್ದು ಅವರಿಬ್ಬರೊಳಗೆ ಸಲಿಂಗ ಸಂಬಂಧ ಇದ್ದಿದ್ದರಿಂದ ಮಾತ್ರ ಸಾಧ್ಯವಾಗಿರಬಹುದು. ನೆಹರೂ ಮತ್ತು ಗಾಂಧಿ ಒಮ್ಮೆ ತಮ್ಮ ಕುಟುಂಬದ ಮನೆಯೊಂದರಲ್ಲಿ ಒಂದೇ ಮಂಚದಲ್ಲಿ ಮಲಗಿದ್ದರು ಎಂದು ನನ್ನ ದಕ್ಷಿಣ ಭಾರತೀಯ ಮಿತ್ರರೊಬ್ಬರು ಹೇಳಿದ್ದರು. ಸಲಿಂಗಕಾಮಿಗಳಾಗಿರುವುದು ತಪ್ಪಲ್ಲ. ಆದರೆ (ಸರ್ದಾರ್ ವಲ್ಲಭಭಾಯ್ ) ಪಟೇಲ್ ಬದಲಿಗೆ (ಪ್ರಧಾನಿಯಾಗಲು) ನೆಹರೂಗೆ ಮಣೆ ಹಾಕಿದ್ದು ಮಾತ್ರ ಒಪ್ಪುವಂತಹದ್ದಲ್ಲ." ಎಂದು ನೇರವಾಗಿ ಆರೋಪಿಸಿದ್ದಾರೆ.
2014ರ ಚುನಾವಣೆ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಪ್ರಖರ ಮೋದಿ ಬೆಂಬಲಿಗರಾಗಿ ಬದಲಾದ ಮಧುಕೀಶ್ವರ್ ಆಗಾಗ ಮೋದಿ, ಬಿಜೆಪಿ ಪರವಾಗಿ, ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಕಾರುವ, ಸಮಾಜದಲ್ಲಿ ಒಡಕುಂಟು ಮಾಡುವಂತಹ ಹಾಗು ಕೆಲವೊಮ್ಮೆ ಹಸಿ ಸುಳ್ಳುಗಳನ್ನೇ ಸುದ್ದಿಯಂತೆ ಟ್ವೀಟ್ ಮಾಡುವ ಮೂಲಕ ಇತ್ತೀಚಿಗೆ ಕುಖ್ಯಾತರಾಗಿದ್ದಾರೆ. ಈಗ ಅವರು ರಾಷ್ಟ್ರಪಿತನ ಮೇಲೆಯೇ ಇಂತಹದೊಂದು ಗಂಭೀರ ಆರೋಪ ಮಾಡಿದ್ದಾರೆ.
ಮಧು ಟ್ವೀಟ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಆದರೆ ಈ ಬಗ್ಗೆ ತಲೆಕೆಡಿಸಿಕೊಳ್ಳದ ಮಧು ತಮ್ಮ ನಿಲುವನ್ನು ಸಮರ್ಥಿಸಿಕೊಂಡು ಮತ್ತೆ ಟ್ವೀಟ್ ಮಾಡಿದ್ದಾರೆ.
Nehru's extraordinary hold over Gandhi can only be explained by gay relation between 2. I heard from South Indian friend in whose family home Nehru & Gandhi once spent night--that both slept in same bed. Nothing wrong in being gay. But bypassing Patel to favour Nehru unacceptable https://t.co/wvHzQXrT0e
— MadhuPurnima Kishwar (@madhukishwar) 2 June 2019
By this logic we should ban study of history & ban any & all mention of people who are dead. Do you even realise what you are saying? When long dead Savarkar is demonised, you have no problem. But U guys go ballistic at any mention of #Sickular heroes https://t.co/UYQJMpcfkL
— MadhuPurnima Kishwar (@madhukishwar) 2 June 2019
This person is a leading light of RW cheerleaders and has a senior academic position in Govt body. How shameless can it get? https://t.co/UY0NX9Z0mr
— Rajdeep Sardesai (@sardesairajdeep) 2 June 2019