ಸ್ನೇಹಿತೆಯೊಂದಿಗೆ ಸಿಕ್ಕಿಬಿದ್ದ ಯುವಕನ ಥಳಿಸಿ ಹತ್ಯೆಗೈದರು
ಲಕ್ನೊ, ಜೂ.3: ಸ್ನೇಹಿತೆಯೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ಕಂಡುಬಂದ ಯುವಕನನ್ನು ಥಳಿಸಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಗೋರಖ್ಪುರದಲ್ಲಿ ನಡೆದಿದೆ.
ಶೇರ್ಪುರ ಗ್ರಾಮದ ಸೂರಜ್ ಪಾಲ್ ಎಂಬ 24 ವರ್ಷದ ಯುವಕ ತನ್ನ ಸ್ನೇಹಿತೆಯ ಮನೆಗೆ ತೆರಳಿ ಆಕೆಯೊಂದಿಗೆ ಇದ್ದ ಸಂದರ್ಭ ಅಲ್ಲಿಗೆ ಹುಡುಗಿಯ ಸಹೋದರ ಗೌತಮ್ ಅಕಸ್ಮಾತಾಗಿ ಆಗಮಿಸಿದ್ದಾನೆ. ಈ ವೇಳೆ ಸೂರಜ್ಪಾಲ್ ತನ್ನಲ್ಲಿದ್ದ ಲೈಸೆನ್ಸ್ ರಹಿತ ಬಂದೂಕಿನಿಂದ ಗೌತಮ್ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡಿನ ಸದ್ದು ಕೇಳಿ ಧಾವಿಸಿ ಬಂದ ಗ್ರಾಮಸ್ಥರು ಸೂರಜ್ಪಾಲ್ನ ಮೇಲೆರಗಿ ಆತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.
ತಲೆಗೆ ತೀವ್ರ ಗಾಯಗೊಂಡ ಸೂರಜ್ನನ್ನು ಆಸ್ಪತ್ರೆಗೆ ದಾಖಲಿಸಿದರೂ ಆ ವೇಳೆಗಾಗಲೇ ಆತ ಮೃತಪಟ್ಟಿದ್ದ. ಘಟನೆಗೆ ಸಂಬಂಧಿಸಿ 6 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story