ಬಿಜೆಪಿ ಶಾಸಕ ರಾಜೇಶ್ ಪಾಟ್ನೇಕರ್ ಗೋವಾ ವಿಧಾನಸಭೆ ಸ್ಪೀಕರ್
ಪಣಜಿ, ಜೂ.4: ಗೋವಾ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಬಿಜೆಪಿ ಶಾಸಕ ರಾಜೇಶ್ ಪಾಟ್ನೇಕರ್ ಚುನಾಯಿತರಾಗಿದ್ದಾರೆ. ವಿಧಾನಸಭೆಯ ಸ್ಪೀಕರ್ ಆಯ್ಕೆಗಾಗಿ ಕರೆಯಲಾಗಿದ್ದ ವಿಶೇಷ ಅಧಿವೇಶನದಲ್ಲಿ ಚುನಾವಣೆ ನಡೆಯಿತು.
40 ಸದಸ್ಯಬಲದ ವಿಧಾನಸಭೆಯಲ್ಲಿ ಬಿಜೆಪಿಯ ರಾಜೇಶ್ ಪಾಟ್ನೇಕರ್ 22 ಮತ ಪಡೆದು ಚುನಾಯಿತರಾದರೆ, ಕಾಂಗ್ರೆಸ್ನ ಪ್ರತಾಪಸಿನ್ಹ ರಾಣೆ 16 ಮತ ಗಳಿಸಿದರು. ಗೋವಾ ವಿಧಾನಸಭೆಯ ಸ್ಪೀಕರ್ ಆಗಿದ್ದ ಪ್ರಮೋದ್ ಸಾವಂತ್ ಮನೋಹರ್ ಪಾರಿಕ್ಕರ್ ನಿಧನರಾದ ಬಳಿಕ ಮುಖ್ಯಮಂತ್ರಿ ಹುದ್ದೆಗೇರಿದ್ದರಿಂದ ಕಳೆದ ಮಾರ್ಚ್ನಿಂದ ಸ್ಪೀಕರ್ ಹುದ್ದೆ ಖಾಲಿಯಿತ್ತು. ಹಂಗಾಮಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದ ಶಾಸಕ ಮೈಕೆಲ್ ಲೋಬೋ ಪೂರ್ಣಾವಧಿ ಸ್ಪೀಕರ್ ಹುದ್ದೆ ಸ್ವೀಕರಿಸಲು ನಿರಾಕರಿಸಿದ್ದರು.
ರಾಜೇಶ್ ಪಾಟ್ನೇಕರ್ ಉತ್ತರಗೋವಾದ ಬಿಚೋಲಿಂದ ಕ್ಷೇತ್ರದ ಶಾಸಕರಾಗಿದ್ದಾರೆ. ನೂತನ ಸ್ಪೀಕರ್ಗೆ ಪ್ರತಾಪ್ಸಿನ್ಹ ರಾಣೆ ಅಭಿನಂದನೆ ಸಲ್ಲಿಸಿದ್ದಾರೆ.
Next Story