ದೇವಸ್ಥಾನ ಪ್ರವೇಶಿಸಿದ ದಲಿತ ಬಾಲಕನಿಗೆ ಮಾರಣಾಂತಿಕ ಹಲ್ಲೆ: ಆರೋಪ
ಘಟನೆಯ ವಿಡಿಯೋ ವೈರರ್
ಜೈಪುರ್, ಜೂ.6: ರಾಜಸ್ಥಾನದ ಪಾಲಿ ಜಿಲ್ಲೆ ಧನೇರಿಯ ಎಂಬ ಗ್ರಾಮದಲ್ಲಿ ದೇವಸ್ಥಾನ ಪ್ರವೇಶಿಸಿದ ದಲಿತ ಬಾಲಕನೊಬ್ಬನಿಗೆ ಕೇಸರಿ ಶಾಲು ಧರಿಸಿದ ವ್ಯಕ್ತಿಗಳ ತಂಡ ಅಮಾನುಷವಾಗಿ ಥಳಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಾಲಕನ ಕೈಕಾಲುಗಳನ್ನು ಹಗ್ಗದಿಂದ ಬಿಗಿಯಾಗಿ ಕಟ್ಟಿರುವುದು ಹಾಗೂ ಕೇಸರಿ ಶಾಲು ಧರಿಸಿದವರು ಆತನಿಗೆ ಕೋಲುಗಳಿಂದ ಥಳಿಸುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಬಾಲಕ ತನ್ನನ್ನು ಬಿಟ್ಟು ಬಿಡುವಂತೆ ಗೋಗರೆದರೂ ದುಷ್ಕರ್ಮಿಗಳು ಆತನ ಮೇಲೆ ಹಲ್ಲೆ ನಡೆಸಿದ್ದಾರೆ.
ಆದರೆ ಬಾಲಕ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಳುಳ ನೀಡಿದ್ದಕ್ಕೆ ಆತನನ್ನು ಥಳಿಸಲಾಗಿತ್ತೆಂದು ರಾಜಸ್ಥಾನ ಪೊಲೀಸರು ಹೇಳುತ್ತಿದ್ದು, ಬಾಲಕನ ವಿರುದ್ಧ ಪೋಕ್ಸೋ ಕಾಯ್ದೆಯನ್ವಯ ಪ್ರಕರಣ ದಾಖಲಿಸಿದ್ದಾರೆ. ಬಾಲಕನನ್ನು ಈಗ ಬಾಲಾಪರಾಧಿಗಳ ಆಶ್ರಯತಾಣಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
#BREAKING राजस्थान के जिला पाली गाॅव धनेरिया मे दलित नाबालिग लङके को इतनी बेरहमी से पीटा की मन विचलित हो उठा।
— The Dalit Voice (@ambedkariteIND) June 3, 2019
इस लङके की गलती सिर्फ इतनी है कि यह गाँव के मन्दिर पर चढ़ गया था !
भगवा गमछा ङाले युवक नजर आ रहा है बताया जा रहा है कि वह भाजपा का कार्यकर्ता हैpic.twitter.com/4kT4olJA1y