ಜುಲೈ 1ರಿಂದ ನೆಫ್ಟ್, ಆರ್ ಟಿಜಿಎಸ್ ಮೂಲಕ ಹಣ ವರ್ಗಾವಣೆಗೆ ಯಾವುದೇ ಶುಲ್ಕವಿಲ್ಲ: ಆರ್ ಬಿಐ
ಹೊಸದಿಲ್ಲಿ, ಜೂ.11: ನೆಫ್ಟ್ ಮತ್ತು ಆರ್ ಟಿಜಿಎಸ್ ಮೂಲಕ ಮಾಡಲಾಗುವ ಹಣ ವರ್ಗಾವಣೆಗೆ ಶುಲ್ಕ ವಿಧಿಸುವುದನ್ನು ಜುಲೈ 1ರಿಂದ ನಿಲ್ಲಿಸಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲಾ ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ.
ಡಿಜಿಟಲ್ ವಹಿವಾಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬ್ಯಾಂಕ್ ಗಳಿಗೆ ನೀಡಿದ ಸೂಚನೆಯಲ್ಲಿ ಆರ್ ಬಿಐ ತಿಳಿಸಿದೆ.
Next Story