ಮಾವೋವಾದಿಗಳ ಗುಂಡಿನ ದಾಳಿ: ಐವರು ಪೊಲೀಸರು ಮೃತ್ಯು
ಜೆಮ್ಶೆದ್ಪುರ, ಜೂ. 14: ಜಾರ್ಖಂಡ್ನ ಜೆಮ್ಶೆದ್ಪುರದ ಸಮೀಪ ಮಾವೋವಾದಿಗಳು ಗುಂಡು ಹಾರಿಸಿ ಐವರು ಪೊಲೀಸರನ್ನು ಹತ್ಯೆಗೈದಿದ್ದಾರೆ. ಜೆಮ್ಶೆದ್ಪುರದಿಂದ 60 ಕಿ.ಮೀ. ದೂರದಲ್ಲಿರುವ ಸರೈಕೇಲಾ ಜಿಲ್ಲೆಯ ಸ್ಥಳೀಯ ಮಾರುಕಟ್ಟೆಯಲ್ಲಿ ಪೊಲೀಸರು ಶುಕ್ರವಾರ ಸಂಜೆ ಗಸ್ತು ನಡೆಸುತ್ತಿದ್ದಾಗ ಮಾವೋವಾದಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಇಬ್ಬರು ಮಾವೋವಾದಿಗಳು ದಾಳಿ ನಡೆಸಿದ್ದು, ಪೊಲೀಸರಿಂದ ಶಸ್ತ್ರಾಸ್ತ್ರಗಳನ್ನು ದೋಚಿದ್ದಾರೆ.
ದಾಳಿ ನಡೆದ ಸ್ಥಳ ಪಶ್ಚಿಮಬಂಗಾಳ- ಜಾರ್ಖಂಡ್ ಗಡಿಗೆ ಸಮೀಪವಾಗಿದೆ. ಈ ತಿಂಗಳ ಆರಂಭದಲ್ಲಿ ಜಾರ್ಖಂಡ್ನ ದಮ್ಕಾ ಜಿಲ್ಲೆಯ ತಲ್ದಂಗಾಲ್ ಅರಣ್ಯದಲ್ಲಿ ಶಸಸ್ತ್ರ ಸೀಮಾ ಬಲ ಹಾಗೂ ಮಾವೋವಾದಿಗಳ ನಡುವೆ ನಡೆದ ಗುಂಡಿನ ಚಕಮಕಿ ನಡೆದಿತ್ತು. ಈ ಘಟನೆಯಲ್ಲಿ ಓರ್ವ ಯೋಧ ಹುತಾತ್ಮನಾಗಿದ್ದ ಹಾಗೂ ಐವರು ಯೋಧರು ಗಾಯಗೊಂಡಿದ್ದರು.
Next Story