ಹಿಸ್ಸಾರ್ನ ಮಿನಿ ಸಚಿವಾಲಯ ಸಂಕೀರ್ಣದಲ್ಲಿ ಎಎಸ್ಐ ಆತ್ಮಹತ್ಯೆ
ಹಿಸ್ಸಾರ್(ಹರ್ಯಾಣ),ಜೂ.17: ಇಲ್ಲಿಯ ಮಿನಿ ಸಚಿವಾಲಯ ಕಟ್ಟಡದಲ್ಲಿ ಪೊಲೀಸ್ ಅಧಿಕಾರಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎಎಸ್ಐ ರಾಕೇಶ ಕುಮಾರ್(44) ಅವರ ಶವವು ಸೋಮವಾರ ಬೆಳಿಗ್ಗೆ ಕಟ್ಟಡದಲ್ಲಿ ಪತ್ತೆಯಾಗಿದೆ. ಅವರ ಶರ್ಟ್ನ ಜೇಬಿನಲ್ಲಿ ಆತ್ಮಹತ್ಯಾ ಚೀಟಿ ಸಿಕ್ಕಿದ್ದು,ಮಾನಸಿಕವಾಗಿ ಜರ್ಜರಿತನಾಗಿರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾರೆ.
ಅವರು ಹಂಸಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Next Story