ಕಮರಿಗೆ ಬಿದ್ದ ಬಸ್: 42 ಪ್ರಯಾಣಿಕರು ಮೃತ್ಯು
35 ಮಂದಿಗೆ ಗಾಯ
ಮನಾಲಿ, ಜೂ.20: ಬಸ್ಸೊಂದು ಕಮರಿಗೆ ಬಿದ್ದ ಪರಿಣಾಮ 42 ಪ್ರಯಾಣಿಕರು ಮೃತಪಟ್ಟು 35 ಮಂದಿ ಗಾಯಗೊಂಡ ಘಟನೆ ಮನಾಲಿಯಲ್ಲಿ ಗುರುವಾರ ಸಂಭವಿಸಿದೆ.
ಬಂಜಾರ್ ಸಮೀಪ ಘಟನೆ ನಡೆದಿದ್ದು, ಬಸ್ ಕಮರಿಗೆ ಉರುಳಿದೆ. ಕೂಡಲೇ ಸ್ಥಳಕ್ಕೆ ಸ್ಥಳೀಯರು ಮತ್ತು ಪೊಲೀಸ್ ಸಿಬ್ಬಂದಿ ಧಾವಿಸಿ ಬಂದಿದ್ದು, ಪ್ರಯಾಣಿಕರನ್ನು ರಕ್ಷಿಸಿದ್ದಾರೆ.
ನಜ್ಜುಗುಜ್ಜಾಗಿದ್ದ ಬಸ್ ನಿಂದ ಗಾಯಗೊಂಡ ಪ್ರಯಾಣಿಕರನ್ನು ಹೊರತೆಗೆಯಲಾಗಿದ್ದು, ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ.
“ಸುಮಾರು 42 ಪ್ರಯಾಣಿಕರು ಮೃತಪಟ್ಟಿದ್ದಾರೆ. ನಾನು ಸ್ಥಳಕ್ಕೆ ಧಾವಿಸುತ್ತಿದ್ದೇನೆ. ಸದ್ಯಕ್ಕೆ ಲಭಿಸಿರುವ ಮಾಹಿತಿಯ ಪ್ರಕಾರ ಗಾಯಗೊಂಡ ಎಲ್ಲಾ ಪ್ರಯಾಣಿಕರು ಸ್ಥಿತಿ ಗಂಭೀರವಾಗಿದೆ” ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
Next Story