ವಿವಾದ ಸೃಷ್ಟಿಸಿದ ರಾಹುಲ್ ಗಾಂಧಿಯ ‘ನ್ಯೂ ಇಂಡಿಯಾ’ ಟ್ವೀಟ್
ಹೊಸದಿಲ್ಲಿ, ಜೂ.21: ಯೋಗ ದಿನಾಚರಣೆಯಂಗವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾಡಿದ್ದ ಟ್ವೀಟೊಂದು ವಿವಾದ ಸೃಷ್ಟಿಸಿದೆ. ಭಾರತೀಯ ಸೇನೆಯ ಶ್ವಾನದಳ ಮತ್ತು ಸೈನಿಕರು ಯೋಗ ಮಾಡುತ್ತಿರುವ ಫೋಟೊ ಟ್ವೀಟ್ ಮಾಡಿ ರಾಹುಲ್ ಗಾಂಧಿ, ‘ನ್ಯೂ ಇಂಡಿಯಾ’ ಎಂದು ಹೇಳಿದ್ದರು.
ಈ ಟ್ವೀಟ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮಿತ್ ಶಾ ಯೋಗ ದಿನಾಚರಣೆ ಮತ್ತು ಸೇನಾಪಡೆಗೆ ಮಾಡಿದ ಅವಮಾನ ಎಂದು ಹೇಳಿದ್ದಾರೆ.
“ತ್ರಿವಳಿ ತಲಾಕನ್ನು ಬೆಂಬಲಿಸುವ ಮನಸ್ಥಿತಿಯಲ್ಲೇ ಅವರ ನಕಾರಾತ್ಮಕ ಭಾವನೆಗಳು ವ್ಯಕ್ತವಾಗುತ್ತವೆ. ಇದೀಗ ಅವರು ಯೋಗ ದಿನಾಚರಣೆಯನ್ನು ಮತ್ತು ಸೇನಾ ಪಡೆಯನ್ನು ವ್ಯಂಗ್ಯ ಮಾಡಿದ್ದಾರೆ” ಎಂದು ಶಾ ಹೇಳಿದ್ದಾರೆ.
New India. pic.twitter.com/10yDJJVAHD
— Rahul Gandhi (@RahulGandhi) June 21, 2019
Next Story